ಬಂಟ್ವಾಳ ತಾಲೂಕಿನ ಅಡ್ಯನಡ್ಕ ಎಜುಕೇಶನಲ್ ಸೊಸೈಟಿ(ರಿ) ವತಿಯಿಂದ ತಾಯಂದಿರ ಮಹಾ ಸಮಾವೇಶ ಕಾರ್ಯಕ್ರಮವು ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಫೆಬ್ರುವರಿ 17ರಂದು ನಡೆಯಲಿದೆ.
‘ಸುಂದರ ನಾಳೆಗೆ, ತಾಯಂದಿರ ಬೆಸುಗೆ’ ಹಾಗೂ ‘ಸಮೃದ್ಧ ಸುಶಿಕ್ಷಿತ ಕುಟುಂಬ ಬಂಧಕ್ಕೆ ದಿವ್ಯ ಸುಗಂಧ’ ಸಮಾವೇಶದ ಘೋಷವಾಕ್ಯವಾಗಿದ್ದು . ಸಮಾವೇಶದಲ್ಲಿ ‘ಮಕ್ಕಳ ಬೆಳವಣಿಗೆಯಲ್ಲಿ ತಾಯಂದಿರ ಸಹಯೋಗ’ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ.
ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ಅಡ್ಯನಡ್ಕ ಇದರ ಅಧ್ಯಕ್ಷ ಗೋವಿಂದ ಪ್ರಕಾಶ ಸಾಯ ಸಮಾವೇಶ ಉದ್ಘಾಟಿಸುವರು. ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆಯಿಷಾ ಎ. ಎ. ಪೆರ್ಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರಿನ ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಇದರ ಅಧ್ಯಕ್ಷರಾದ ಸುಮಾ ಅರುಣ್ ಮಾನ್ವಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅಡ್ಯನಡ್ಕ ಎಂಜುಕೇಶನ್ ಸೊಸೈಟಿ ಆಡಳಿತಾಧಿಕಾರಿ ರಮೇಶ ಎಂ ಬಾಯಾರು ತಿಳಿಸಿರುತಾರೆ.