Tuesday, January 21, 2025
ಸುದ್ದಿ

ನಿಸರ್ಗ ಫ್ರೆಂಡ್ಸ್ (ರಿ.) ಪಾದೆಕೆರೆ ಇನ್ನಂಜೆ ಇದರ 11ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ – ಕಹಳೆ ನ್ಯೂಸ್

ಕೃಷಿಕರನ್ನು ಗೌರವಿಸಿ, ವಿದ್ಯಾರ್ಥಿಗಳಿಗೆಗಳಿಗೆ ಅಭಿನಂದನೆಗಳು ಸಾರ್ವಜನಿಕರಿಗೆ ಕ್ರೀಡಾ ಕೂಟ,ಇಂತಹ ಮಾದರಿ ಕಾರ್ಯಕ್ರಮ ಮಾಡುತ್ತಿರುವ ನಿಸರ್ಗ ಸಂಘ ಆದರ್ಶ ವಾಗಿದೆ ಈ ಭಾಗದ ಶಾಸಕಾನಾಗಿ ಅಭಿನಂದಿಸುತ್ತೇನೆ, ಮತ್ತು ಸಂಪೂರ್ಣ ಸಹಾಕಾರ ನೀಡುತ್ತೇನೆ ಎಂದರು.ನಿಸರ್ಗ ಫ್ರೆಂಡ್ಸ್ (ರಿ.) ಪಾದೆಕೆರೆ ಇನ್ನಂಜೆ ಇದರ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರುಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ನಿಸರ್ಗ ಫ್ರೆಂಡ್ಸ್ ಅಧ್ಯಕ್ಷರಾದ ವಿಜಯ್ ಆಚಾರ್ಯ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ, ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರಾದ ಸುನಿತಾ ಎಸ್ ಮೂಲ್ಯ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಅಮೀನ್ ಶಂಕರಪುರ, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿವರ್ಮ ಶೆಟ್ಟಿ, ಉದ್ಯಮಿಗಳಾದ ಅಲ್ವಿನ್ ಪಿ ಮೆನೇಜಸ್, ಮೂರ್ತಿ ಆಚಾರ್ಯ ಬಿಳಿಯಾರು, ಯುವ ಕೃಷಿಕರಾದ ಅಧೀಶ್ ಆಚಾರ್ಯ ಹಾಗೂ ನಿಸರ್ಗ ಫ್ರೆಂಡ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು