Friday, April 11, 2025
ದಕ್ಷಿಣ ಕನ್ನಡಸುದ್ದಿ

ನಮೋ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ‘ಮೈ ಲವ್ ಮೈ ನೇಶನ್’ ಅಭಿಯಾನದಡಿ ಶಿಲ್ಪಿಗಳನ್ನು ಹಾಗೂ ಚಿತ್ರಕಾರರಿಗೆ ಸನ್ಮಾನ – ಕಹಳೆ ನ್ಯೂಸ್

ಮಂಗಳೂರು: ನಮೋ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಇಂದು ‘ಮೈ ಲವ್ ಮೈ ನೇಶನ್’ ಅಭಿಯಾನದಡಿ ಶಿಲ್ಪಿಗಳನ್ನು ಹಾಗೂ ಚಿತ್ರಕಾರರನ್ನು ಸನ್ಮಾನಿಸುವ ಕಾರ್ಯ ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿದ ಜಯಪ್ರಕಾಶ್, ವಿನಾಯಕ ಶೇಟ್, ಕಿಶೋರ್ ಪೈ, ಸುಧಾಮ ಆಚಾರ್ಯ, ರಾಮಚಂದ್ರ ಆಚಾರ್ಯ, ಪುರುಷೋತ್ತಮ ಆಚಾರ್ಯ ಹರ್ಷ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಭಿಯಾನದಡಿ ಈಗಾಗಲೇ ಪೋಸ್ಟ್ ಮ್ಯಾನ್ ಅವರನ್ನು, ಆಶಾ ಕಾರ್ಯಕರ್ತೆಯರನ್ನು, ಪೌರ ಕಾರ್ಮಿಕರನ್ನು, ಪವರ್ ಮೆನ್ ಗಳನ್ನು ಯುವಾ ಬ್ರಿಗೇಡ್ ವತಿಯಿಂದ ಸನ್ಮಾನಿಸಿ ಅವರ ಕೆಲಸ ಕಾರ್ಯಗಳನ್ನು ಅಭಿನಂದಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಮಂಗಲ್ಪಾಡಿ ನರೇಶ್ ಶೆಣೈ, ರಾಘವೇಂದ್ರ ಹೊಳ್ಳ, ಪವನ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ