Sunday, November 24, 2024
ದಕ್ಷಿಣ ಕನ್ನಡಬಂಟ್ವಾಳ

ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಫೆ.21 ರಿಂದ ಫೆ.24ರವರೆಗೆ ಮಂದಿರದ ಶತಾಬ್ದಿ ಸಂಭ್ರಮ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ವಿಭಿನ್ನ ಚಿಂತನೆಯ ಮೂಲಕ ಬೆಳೆಯುತ್ತಿರುವ ಕಲ್ಲಡ್ಕ ಶ್ರೀರಾಮ ಮಂದಿರದ ಸತಾಬ್ದಿ ಸಂಭ್ರಮ ಕಾರ್ಯಕ್ರಮ ಫೆ.21 ರಿಂದ ಫೆ.24 ರವರೆಗೆ ಮಂದಿರದಲ್ಲಿ ನಡೆಯಲಿದೆ.ಶತಾಬ್ದಿ ಕಾರ್ಯಕ್ರಮದಲ್ಲಿ ನೂತನವಾಗಿ ಶ್ರೀ ವಿದ್ಯಾಗಣಪತಿ ದೇವರ ಪ್ರತಿಷ್ಠೆ, ಮಂದಿರದ ಮೇಲ್ಚಾವಣಿಯ ಉದ್ಘಾಟನೆ ಹಾಗೂ ಮಾತೃ ಸಂಗಮ‌ ಕಾರ್ಯಕ್ರಮ ವಿಭಿನ್ನವಾಗಿ ನಡೆಯಲಿದೆ ಎಂದು ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ ಕಲ್ಲಡ್ಕ ಡಾ: ಪ್ರಭಾಕರ್ ಭಟ್ ತಿಳಿಸಿದರು.

ಫೆ.21 ರಂದು ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯ ನೇತ್ರಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ತೀರ್ಥ ಕಲಶಗಳನ್ನು ಮಂದಿರಕ್ಕೆ ತರಲಾಗುತ್ತದೆ. ಶ್ರೀ ರಾಮವಿದ್ಯಾಕೇಂದ್ರದ ಮಕ್ಕಳಿಂದ ಸರಸ್ವತಿ ಪೂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಮಂದಿರದ ಸುತ್ತಮುತ್ತಲಿನ ಭಾಗದಿಂದ ಆಗಮಿಸಿದ ಹೊರಕಾಣಿಕೆ ನರಹರಿ ಪರ್ವತ ಧ್ವಾರದಿಂದ ಮಂದಿರದವರೆಗೆ ವೈಭವ ಮೆರವಣಿಗೆ ಮೂಲಕ ಆಗಮನವನ್ನು ಸ್ವಾಗತಿಸಿಲಿದ್ದೇವೆ. ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ. 22 ರಂದು ಶ್ರೀ ವಿದ್ಯಾಗಣಪತಿ ದೇವರ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮಾಂಗಣ ಲೋಕಾರ್ಪಣೆ ಕಾರ್ಯಕ್ರಮ, ಫೆ.23 ರಂದು ಮಾತೃ ಸಂಗಮ ಹಾಗೂ ಕುಂಕುಮಾರ್ಚನೆ,  ಫೆ. 24 ರಂದು 13 ಕೋಟಿ ರಾಮನಾಮ ತಾರಕ ಜಪಯಜ್ಞ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು,  ಹಿರಿಯರ ಪ್ರಕಾರ ಗಣಪತಿಯ ಇರುವಿಕೆಯು ಗೋಚರಕ್ಕೆ ಬಂದ ಹಿನ್ನೆಲೆಯಲ್ಲಿ ,ವಾಸ್ತು ತಜ್ಞರ ಸಲಹೆಯ ಮೇರೆಗೆ, ಪ್ರಶ್ನಾ ಚಿಂತನೆಯ ಪ್ರಕಾರ 6 ಅಡಿ 2 ಇಂಚು ಎತ್ತರದ ಗಣಪತಿ ವಿಗ್ರಹ ಪ್ರತಿಷ್ಟಾಪನೆ ಮಾಡಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ನಾರಾಯಣ ಸೋಮಯಾಜಿ, ಚೆನ್ನಪ್ಪ ಆರ್.ಕೋಟ್ಯಾನ್, ನಾಗೇಶ್ ಕಲ್ಲಡ್ಕ ಉಪಸ್ಥಿತರಿದ್ದರು.