Recent Posts

Sunday, January 19, 2025
ಸುದ್ದಿ

ಹೆಲ್ಮೆಟ್ ಹಾಕದ್ದಕ್ಕೆ ಕಾರು ಚಾಲಕನಿಗೆ ಹುಬ್ಬಳ್ಳಿ ಪೊಲೀಸರಿಂದ ದಂಡ!

ಹುಬ್ಬಳ್ಳಿ: ಬೈಕ್ ಸವಾರರು ಹೆಲ್ಮೆಟ್ ಹಾಕದೇ ಇದ್ದರೆ ಸಂಚಾರಿ ಪೊಲೀಸರು ನೋಟಿಸ್ ನೀಡೋದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಕಾರು ಚಾಲಕರೊಬ್ಬರಿಗೆ ಸಂಚಾರಿ ಪೊಲೀಸರು ಹೆಲ್ಮೆಟ್ ಹಾಕಲಿಲ್ಲ ಎಂದು ನೋಟಿಸ್ ನೀಡಿ, ದಂಡ ಕಟ್ಟಿಸಿಕೊಂಡು ಎಡವಟ್ಟು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಭಾನುವಾರ ಸಂಜೆ ರವಿ ಎಂಬುವವರ ಕಾರನ್ನು ತಡೆದಿದ್ದಾರೆ. ಹಳೆಯ ಬಸ್ ನಿಲ್ದಾಣದ ಬಳಿ ಉತ್ತರ ಸಂಚಾರಿ ಪೊಲೀಸರು ರವಿ ಕಾಂಬಳೆರನ್ನು ನಿಲ್ಲಿಸಿ ವಿಚಾರಣೆ ನಡೆಸಿದಾಗ ಎಲ್ಲ ಡಾಕ್ಯುಮೆಂಟ್ ಸರಿಯಾಗಿತ್ತು. ಆದ್ದರೂ ಹೆಲ್ಮೆಟ್ ಇಲ್ಲ ಎಂದು ಪೊಲೀಸರು ನೋಟಿಸ್ ನೀಡಿದ್ದಾರೆ. ಅಲ್ಲದೇ ನೂರು ರೂ. ದಂಡ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಇನ್ನು ವಿಷಯ ತಿಳಿದ ಕೆಲ ಸಾರ್ವಜನಿಕರು, ಕಾರು ಚಾಲಕರೂ ಹೆಲ್ಮೆಟ್ ಹಾಕಬೇಕಾ ಅಂತ ಗಾಬರಿಗೊಂಡಿದ್ದರು. ಇನ್ನು ಪೊಲೀಸರ ಈ ಎಡವಟ್ಟನ್ನು ಧಾರವಾಡ ಜಿಲ್ಲೆಯ ಓಲಾ ಕ್ಯಾಬ್ ಸಂಘದ ಅಧ್ಯಕ್ಷ ಮುರಳಿ ಮಾಳ್ವದೆ ಅವರು ಫೇಸ್ ಬುಕ್ ಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Response