Wednesday, January 22, 2025
ಸುದ್ದಿ

ಬೆಳ್ತಂಗಡಿ : ಫೆ.24ರಂದು ರಾಮ ಶಿಶು ಮಂದಿರದ ವಾರ್ಷಿಕೋತ್ಸವ ಮತ್ತು ಭಾರತ್ ಮಾತಾ ಪೂಜನ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳ್ತಂಗಡಿ : ಅಲೆಕ್ಕಿ ಮುಗೇರಡ್ಕ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಇದರ ಶ್ರೀ ರಾಮ ಶಿಶು ಮಂದಿರದ ವಾರ್ಷಿಕೋತ್ಸವ ಮತ್ತು ಭಾರತ್ ಮಾತಾ ಪೂಜನ ಕಾರ್ಯಕ್ರಮವು ಫೆ.24ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಂಜೆ 4.00ರಿಂದ ಮಾತೃ ಪಾದ ಪೂಜೆ, ಸಂಜೆ 6.30ಕ್ಕೆ ಭಾರತ್ ಮಾತಾ ಪೂಜಾನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ 7.00ರಿಂದ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ.

ತದನಂತರ ಶಿಶುಮಂದಿರ ಬಾಲಗೋಕುಲದ ಮತ್ತು ಮಾತೃ ಮಂಡಳಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.