Tuesday, January 21, 2025
ಉಡುಪಿಸುದ್ದಿ

ಕಾಪು ತಾಲ್ಲೂಕು ಮಟ್ಟದ ಲೋಕಾಯುಕ್ತ ಪೋಲೀಸ್ ಜನಸಂಪರ್ಕ ಸಭೆ – ಕಹಳೆ ನ್ಯೂಸ್

ಕಾಪು ತಾಲ್ಲೂಕಿನ ಪುರಸಭೆ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ, ಉಡುಪಿ ಜಿಲ್ಲೆ ವತಿಯಿಂದ ಕಾಪು ತಾಲ್ಲೂಕು ಮಟ್ಟದ ಸಾರ್ವಜನಿಕ ಅಹವಾಲು ಮತ್ತು ಜನ ಸಂಪರ್ಕ ಸಭೆ ನಡೆಯಿತು.

ಸಭೆಯಲ್ಲಿ ಶ್ರೀ ಸೈಮನ್, ಪೋಲೀಸ್ ಅಧೀಕ್ಷಕರು, ಕ.ಲೋ. ಮಂಗಳೂರು ವಿಭಾಗ ಶ್ರೀ ಪ್ರಕಾಶ್ K C, ಪೋಲೀಸ್ ಉಪಾಧೀಕ್ಷಕರು ಕ.ಲೋ. ಉಡುಪಿ , ಶ್ರೀ ಮಂಜುನಾಥ್, ಪೋಲೀಸ್ ನಿರೀಕ್ಷಕರು, ಶ್ರೀ ರಫೀಕ್ ಪೋಲೀಸ್ ನಿರೀಕ್ಷಕರು ಸಂತೋಷ್ S, ಮುಖ್ಯಾಧಿಕಾರಿ ಪುರಸಭೆ ಕಾಪು ಹಾಗೂ ಕಾಪು ತಹಶಿಲ್ದಾರ್ ಡಾ ಪ್ರತಿಭಾ ಆರ್ ರವರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸದರಿ ಸಭೆಯಲ್ಲಿ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದು ಸ್ಥಳದಲ್ಲಿಯೇ ಹಲವು ದೂರುಗಳನ್ನು ಆಲಿಸಲಾಯಿತು.
ಈ ಸಾರ್ವಜನಿಕ ಅಹವಾಲು ಮತ್ತು ಜನ ಸಂಪರ್ಕ ಸಭೆ 9 ದೂರು ಅಹವಾಲು ಸ್ವೀಕರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ದೂರುಗಳು ಪುರಸಭೆ, ಸರ್ವೆ ಇಲಾಖೆ, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಸಂಬAಧಿಸಿದವುಗಳಾಗಿದ್ದು ದೂರುಗಳನ್ನು ದಾಖಲಿಸಿಕೊಂಡು ಸಂಬoಧಪಟ್ಟ ಇಲಾಖೆಗಳಿಗೆ ಅವುಗಳನ್ನು ಕಳಿಸಿ ಶೀಘ್ರವಾಗಿ ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಲಾಯಿತು.

ಸಭೆಯಲ್ಲಿ ಶ್ರೀ ಸೈಮನ್ ಲೋಕಾಯುಕ್ತ ಪೋಲೀಸ್ ಅಧೀಕ್ಷಕರು, ಲೋಕಾಯುಕ್ತ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರ ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡದೇ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಹಾಗೂ ಸೂಕ್ತ ಕಾರಣವಿಲ್ಲದೇ ತಿರಸ್ಕರಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಕಾಪು ತಾಲ್ಲೂಕು ಕಚೇರಿಯಲ್ಲಿ ಉತ್ತಮ ಆಡಳಿತ ನಡೆಯುತ್ತಿದ್ದು ಪಾರದರ್ಶಕವಾಗಿದೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯವಿದೆ ಎಂದು ತಿಳಿಸಿದರು ಶ್ರೀ ಸೈಮನ್ ತಿಳಿಸಿದರು.
ಲೋಕಾಯುಕ್ತ ಕಾಯಿದೆಯ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕೆಂದು DYSP ಪ್ರಕಾಶ್ ಅಭಿಪ್ರಾಯಪಟ್ಟರು.

ಪೋಲೀಸ್ ನಿರೀಕ್ಷಕರಾದ ಮಂಜುನಾಥ್ ಮಾತನಾಡಿ ಸರ್ಕಾರಿ ನೌಕರರು ಲೋಕಾಯುಕ್ತ ಪೋಲೀಸ್ ಎಂದು ಹೇಳಿಕೊಂಡು ಬರುವ ಬೆದರಿಕೆಯ ಸುಳ್ಳು ಕರೆಗಳನ್ನು ನಂಬಬೇಡಿ. ಯಾವ ಲೋಕಾಯುಕ್ತ ಪೋಲೀಸ್ ಎಂದಿಗೂ ಹಾಗೆ ಕರೆ ಮಾಡುವುದಿಲ್ಲ ಎಂದು ನೌಕರರಿಗೆ ತಿಳುವಳಿಕೆ ಹೇಳಿದರು.
ಪೋಲೀಸ್ ನಿರೀಕ್ಷರಾದ ರಫೀಕ್ ಮಾತನಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಸಾವಧಾನವಾಗಿ ಆಲಿಸಿ ಇತ್ಯರ್ಥಗೊಳಿಸಲು ಕರೆ ನೀಡಿದರು.
ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರು ಮಾತನಾಡಿ ಈ ರೀತಿಯ ಜನ ಸಂಪರ್ಕ ಸಭೆಗಳಿಂದ ಲೋಕಾಯುಕ್ತ ಕುರಿತು ಹೆಚ್ಚು ಜಾಗೃತಿ ಉಂಟಾಗುತ್ತದೆ ಎಂದರು.

ಸದರಿ ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಕುರಿತು ಹಲವು ಮಾಹಿತಿ ನೀಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಮಾತನಾಡಿ ಲೋಕಾಯುಕ್ತ ಸಂಸ್ಥೆ ಪಾರದರ್ಶಕ ಆಡಳಿತಕ್ಕೆ ಪ್ರೇರಣೆ ನೀಡಿದೆ ಎಂದು ಹೇಳಿದರು.