Sunday, January 19, 2025
ಸುದ್ದಿ

ಮಾರ್ಚ್ 2ರಂದು ಟೀಮ್ ದುರ್ಗಾನುಗ್ರಹ ಮುಗೇರಡ್ಕ ಮತ್ತು ನಮೋ ಬ್ರಿಗೇಡ್ ಮುಗೇರಡ್ಕ, ಇವುಗಳ ಆಶ್ರಯದಲ್ಲಿ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ – ಕಹಳೆ ನ್ಯೂಸ್

ಮೊಗ್ರು : ಟೀಮ್ ದುರ್ಗಾನುಗ್ರಹ ಮುಗೇರಡ್ಕ ಮತ್ತು ನಮೋ ಬ್ರಿಗೇಡ್ ಮುಗೇರಡ್ಕ, ಮೊಗ್ರು ಹಾಗೂ ಆಮೇಚೂರ್ ಕಬಡ್ಡಿ ಅಸೊಸೀಯೇಶನ್ ಇವುಗಳ ಆಶ್ರಯದಲ್ಲಿ ಮಾರ್ಚ್ 2 ಶನಿವಾರದಂದು ಹಿಂದೂ ಬಾಂಧವರಿಗೆ 62 ಕೆಜಿ ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಮುಕ್ತ ಲೆವೆಲ್ ಮಾದರಿಯ 8 ಜನರ ಹಗ್ಗಜಗ್ಗಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೋಕ್ತೇಸರರಾದ ಮನೋಹರ ಗೌಡ ಅಂತರ, ಚಂದ್ರಹಾಸ ಗೌಡ ದೇವಸ್ಯ, ಟೀಮ್ ದುರ್ಗಾನುಗ್ರಹ ಮುಗೇರಡ್ಕ ಹಾಗೂ ನಮೋ ಬ್ರಿಗೇಡ್ ಮುಗೇರಡ್ಕ ಇದರ ಪದಾಧಿಕಾರಿಗಳಾದ ಹಿರಿಯರಾದ ರಾಮಣ್ಣ ಗೌಡ ಎರ್ಮಲ, ಅಧ್ಯಕ್ಷರಾದ ಪ್ರಶಾಂತ್ ಎರ್ಮಲ, ಸಂಚಾಲಕರಾದ ಬಾಲಕೃಷ್ಣ ಗೌಡ ಹಾಗೂ ರಮೇಶ್ ನೆಕ್ಕರಾಜೆ, ಕಾರ್ಯದರ್ಶಿ ವರುಣ್ ನೆಕ್ಕರಾಜೆ, ಉಪಾಧ್ಯಕ್ಷರಾದ ಜಗದೀಶ್ ಅರ್ಬಿ, ಕೋಶಾಧಿಕಾರಿ ನಿತಿನ್ ಗೌಡ ಮುಂಡಾಜೆ ಸದಸ್ಯರಾದ ಸಚಿನ್ ಕಡಮ್ಮಜೆ, ಪುರಂದರ ನೈಮಾರು, ಸುಧರ್ಶನ್ ಅಲೆಕ್ಕಿ, ಯೋಗೀಶ್ ಪರಾರಿ,ತ್ರಿಶಾಂಕ್ ಪರಕ್ಕಾಜೆ, ತ್ರಿಲೋಕ್ ಪರಕ್ಕಾಜೆ.ಇವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು