Saturday, November 23, 2024
ಕ್ರೈಮ್ಬೆಂಗಳೂರುರಾಜ್ಯಸುದ್ದಿ

” ಬೆತ್ತಲೆ ಫೋಟೋ, ವೀಡಿಯೋ ನಮ್ಮ ಬಳಿ ಇದೆ, ನೀವು 5 ಲಕ್ಷ ಹಣ ಕೊಡದೇ ಇದ್ದರೆ ಹುಷಾರ್” – ಜೈಲಿನಲ್ಲಿದ್ದುಕೊಂಡೇ ಮಹಿಳೆಯ ಬೆತ್ತಲೆ ಫೋಟೊ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ; 5 ಲಕ್ಷಕ್ಕೆ ರೌಡಿ ಶೀಟರ್ ಮನೋಜ್ ಅಲಿಯಾಸ್‌ ಕೆಂಚ ಡಿಮ್ಯಾಂಡ್ – ಕಹಳೆ ನ್ಯೂಸ್

ಬೆಂಗಳೂರು: ಏರಿಯಾದಲ್ಲಿ ಹವಾ ಇಟ್ಟಿರೋ ರೌಡಿಶೀಟರ್‌ಗಳ ಜೊತೆ ಸ್ನೇಹ ಬೆಳೆಸೋ ಹುಡುಗಿಯರು ಈ ಸ್ಟೋರಿ ನೋಡಲೇಬೇಕು. ನಿಮ್ಮ ನಿಸ್ವಾರ್ಥ ಸ್ನೇಹ, ಪ್ರೀತಿಯನ್ನ ರೌಡಿ ಶೀಟರ್‌ಗಳು ದುರುಪಯೋಗ ಪಡಿಸಿಕೊಳ್ಳಬಾರದು.

ಏಕೆಂದರೆ ಇಲ್ಲೊಬ್ಬ ರೌಡಿ ಶೀಟರ್ ತನ್ನ ಪರಿಚಯಸ್ಥ ಮಹಿಳೆಗೆ ಜೈಲಿನಲ್ಲಿದ್ದುಕೊಂಡೇ  ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ರೌಡಿ ಮನೋಜ್ ಅಲಿಯಾಸ್‌ ಕೆಂಚ, ಬೆತ್ತಲೆ ಫೋಟೊ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಆಗಸ್ಟ್‌ನಲ್ಲಿ ಕೆಂಚ ಮಹಿಳೆಯ ತಾಯಿಗೆ ವಾಟ್ಸಪ್‌ ಮೂಲಕ ಬೆತ್ತಲೆ ಫೋಟೋ ಕಳುಹಿಸಿ 40 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದ. ಅದರಂತೆ ಮಹಿಳೆ ತಾಯಿ ಚೋಟು ಎಂಬವನ ಖಾತೆಗೆ 20 ಸಾವಿರ ರೂ., ಮತ್ತೊಬ್ಬನ ಖಾತೆಗೆ 20 ಸಾವಿರ ರೂ. ಹಣ ಹಾಕಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಕೆಂಚನ ಸ್ನೇಹಿತ ಎಂದು ಹೇಳಿಕೊಂಡು ಕಾರ್ತಿಕ್‌ ಎಂಬಾತ ಸಂತ್ರಸ್ತ ಮಹಿಳೆಗೂ ಕರೆ ಮಾಡಿ, ನಾನು ಕೆಂಚನ ಸ್ನೇಹಿತ ನಿಮ್ಮ ಮಗಳ ಫೋಟೋ, ವೀಡಿಯೋ ನಮ್ಮ ಬಳಿ ಇದೆ, ನನಗೆ ಮನು ಹೇಳಿದ್ದಾನೆ. ನೀವು 5 ಲಕ್ಷ ಹಣ ಕೊಡದೇ ಇದ್ದರೆ, ನಿಮ್ಮ ಮಗಳ ಫೋಟೋವನ್ನು ನಿಮ್ಮ ಅಳಿಯನಿಗೆ ಕಳಿಸ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಫೆಬ್ರವರಿ 12 ರಂದು ಮತ್ತೆ ವಾಟ್ಸಪ್‌, ಫೇಸ್‌ಬುಕ್‌ ಮೆಸೆಂಜರ್‌ಗಳಲ್ಲಿ ಕಾಲ್‌ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಮಹಿಳೆ ಹಾಗೂ ಆಕೆಯ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆಯ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಆ್ಯಕ್ಟ್‌ 67, ಐಪಿಸಿ ಸೆಕ್ಷನ್‌ 34, 384ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಟೌನ್‌ ಪೊಲೀಸರು ಮತ್ತೊಬ್ಬ ಆರೋಪಿ ಕಾರ್ತಿಕ್‌ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಮನುವನ್ನ ಜೈಲಿನಿಂದ ಬಾಡಿವಾರೆಂಟ್ ಆಧಾರದ ಮೇಲೆ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.