Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನಿಧ್ಯದಲ್ಲಿ ಫೆ.17ರಿಂದ ಫೆ.23ರವರೆಗೆ ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನಿಧ್ಯದಲ್ಲಿ ಫೆ.17ರಿಂದ ಫೆ.23ರವರೆಗೆ ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ.

ಫೆ.17ರಂದು ಬೆಳಿಗ್ಗೆ ಗೊನೆ ಮುಹೂರ್ತ (ಮುಳಿಬೈಲು ಕುರಮಜಲುಗುತ್ತಿನಿಂದ) ನಡೆದು, ಬಳಿಕ ಕೋಳಿಗುಂಟ ನಡೆಯಲಿದೆ. ಫೆ.21ರಂದು ಸಂಜೆ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಪ್ರಥಮ ಚೆಂಡು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ. 22ರಂದು ಸಂಜೆ ನಡು ಚೆಂಡು ನಡೆದು ಬಳಿಕ ರಾತ್ರಿ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನಿಧ್ಯದಲ್ಲಿ ವಾರ್ಷಿಕ ವಿಶೇಷ ಮಹಾಪೂಜೆ, ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳಿಗೆ ಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8.30ರಿಂದ ಬರಿಮಾರ ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ಭಕ್ತವೃಂದದವರ ಪ್ರಾಯೋಜಕತ್ವದಲ್ಲಿ ಯಕ್ಷ ಕಾವ್ಯ ತರಂಗಿಣಿ ಪ್ರತಿಷ್ಠಾನ, ದರ್ಬೆ ಬಂಟ್ವಾಳ ಇವರಿಂದ ಕು. ಸಂಧ್ಯಾ ಪೂಜಾರಿ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಯಕ್ಷ ರಸಾಯನ’ ಯಕ್ಷ-ಗಾನ-ನಾಟ್ಯ-ಹಾಸ್ಯ ಸಮ್ಮಿಲನ ನಡೆಯಲಿದೆ.

ಫೆ.23ರಂದು ಬೆಳಿಗ್ಗೆ ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹವನ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನಿಧ್ಯದಲ್ಲಿ ಕಲಶಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.

ಮಧ್ಯಾಹ್ನ 12.00ರಿಂದ ವಿಶೇಷ ಹೂವನ ಪೂಜೆ, ಪರ್ವ ತಂಬಿಲಾದಿ ಸೇವೆಗಳ ನಂತರ ಮಹಾಪೂಜೆ ಹಾಗೂ ಅನ್ನಸಂತರ್ಪನೆ ನೇರವೇರಲಿದೆ. ಸಂಜೆ 5.00ಕ್ಕೆ ಕಡೆಚೆಂಡು ಬಳಿಕ, 7.30ರಿಂದ ಪಲ್ಲಕ್ಕಿ ಉತ್ಸವ ಹಾಗೂ ಗುರು ಭೇಟಿ ನಡೆಯಲಿದೆ. ರಾತ್ರಿ 9.30ರಿಂದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬರಿಮಾರು ಗ್ರಾಮದ ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ.