Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಮೋಹಕ ತಾರೆ ಫಿಟ್ನೆಸ್ ಗೆ ಫ್ಯಾನ್ಸ್ ಫಿದಾ ; ರಮ್ಯಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಮತ್ತೆ ವೈರಲ್…!! – ಕಹಳೆ ನ್ಯೂಸ್

ಬೆಂಗಳೂರು : ಮೋಹಕ ತಾರೆ ರಮ್ಯಾ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಫಿಟ್ನೆಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೌದು ಮೋಹಕ ತಾರೆ ರಮ್ಯಾ ಅವರಿಗೆ ಸ್ಟಾರ್ ನಟರಿಗೆ ಇರುವಷ್ಟೇ ಅಭಿಮಾನಿಗಳಿದ್ದು, ಒಂದು ಕಾಲದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು. ಬಳಿಕ ಸಿನಿರಂಗದಿಂದ ದೂರವಿದ್ದು, ರಾಜಕೀಯಕ್ಕೆ ಕಾಲಿಟ್ಟು ಮಂಡ್ಯದ ಶಾಸಕಿ ಕೂಡ ಆಗಿದ್ದರು. ಮತ್ತೆ ರಾಜಕೀಯದಿಂದಲೂ ದೂರವಾಗಿ ಕಣ್ಮರೆಯಾಗಿದ್ದರು. ನಂತರ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ನಟಿ ರಮ್ಯಾ ಅವರು ನಟ ಧನಂಜಯ್ ನಾಯಕನಾಗಿ ನಟಿಸುತ್ತಿರುವಂತಹ ಉತ್ತರಕಾಂಡ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ಅವರೂ ನಟಿಸುತ್ತಿದ್ದಾರೆ. ಈ ಸಿನಿಮಾಗೋಸ್ಕರವೇ ನಟಿ ರಮ್ಯಾ ತಯಾರಿ ನಡೆಸುತ್ತಿದ್ದು, ಆ ತಯಾರಿಯ ವಿಡಿಯೋವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ನಾಯಕಿಯಾಗಿ ಸಿನಿಮಾ ಲೋಕಕ್ಕೆ ಮರಳಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ರಮ್ಯಾ ಅವರು ಈ ಪಾತ್ರದಿಂದ ಹಿಂದೆ ಸರಿದು, ಬರೀ ಸಿನಿಮಾದ ನಿರ್ಮಾಪಕಿಯಾಗಿ ಮುಂದುವರೆಯುತ್ತಾರೆ. ಬಳಿಕ ರಮ್ಯಾ ಅವರ ಪಾತ್ರದಲ್ಲಿ ಸಿರಿ ರವಿಕುಮಾರ್ ನಟಿಸುತ್ತಾರೆ.