ಮಂಗಳೂರು: ಆಧಾರ್ ಮೂಲಕ ಮೊಬೈಲ್ ಸಿಮ್ ಈಗಾಗಲೇ ದೃಢೀಕರಣವಾಗಿದ್ದರೆ ಮತ್ತೆ ದೃಢೀಕರಣದ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ದೂರ ಸಂಪರ್ಕ ಸಚಿವಾಲಯ ಮತ್ತು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಹೇಳಿದೆ.
ಸುಪ್ರೀಂಕೋರ್ಟಿನ ತೀರ್ಪಿನ ಬಳಿಕ ಆಧಾರ್ ದೃಢೀಕರಣದ ಸಿಮ್‌ಗಳು ಸ್ಥಗಿತವಾಗಲಿವೆ. ಪರ್ಯಾಯ ದಾಖಲೆಗಳನ್ನು ನೀಡಿ ದೃಢೀಕರಿಸಬೇಕಾಗುತ್ತದೆ ಎನ್ನುವ ಗೊಂದಲಗಳು ಸೃಷ್ಟಿಯಾಗಿದ್ದವು.
ಆದರೆ ಈಗ ಸಿಮ್ ದೃಢೀಕರಣದ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.