Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬ್ರಹ್ಮಕಲಶೋತ್ಸವಕ್ಕೆ 2 ದಿನ ಬಾಕಿಯಿರುವಾಗ ಹುತ್ತಕ್ಕೆ ಪೂಜೆ ಸಲ್ಲಿಸುವ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗ ಪ್ರತ್ಯಕ್ಷ ; ಭಕ್ತರ ಮನದ ಭಕ್ತಿ ನೂರ್ಮಡಿ – ಕಹಳೆ ನ್ಯೂಸ್

ಹುತ್ತಕ್ಕೆ ಪೂಜೆ ಸಲ್ಲಿಸುವ ಪುತ್ತೂರು ತಾಲೂಕಿನ ಏಕೈಕ ಕ್ಷೇತ್ರ ಎಂದು ಖ್ಯಾತಿ ಹೊಂದಿರುವ ಕೊಳ್ತಿಗೆ ಗ್ರಾಮದ ಪಾಲ್ತಾಡು ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.17 ರಿಂದ ಫೆ.24 ರವರೆಗೆ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಇದಕ್ಕೆ ಕ್ಷೇತ್ರದಲ್ಲಿ ಸಿದ್ದತೆಗಳು ಭರದಿಂದ ನಡೆಯುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೆ ಒಂದೆರೆಡು ದಿನಗಳು ಬಾಕಿ ಇರುವ ಹೊತ್ತಲ್ಲಿ ಅಚ್ಚರಿಯೊಂದು ಕಂಡು ಬಂದಿದೆ.

ಬುಧವಾರ ದೇವಸ್ಥಾನದ ಒಳಗೆ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಗರ್ಭಗುಡಿಯ ದಕ್ಷಿಣ ದಿಕ್ಕಿನಲ್ಲಿ ಇಡಲಾದ ಸಣ್ಣ ಪ್ರವೇಶ ದ್ವಾರದ ಮೂಲಕ ನಾಗರಾಜ ಒಳ ಪ್ರವೇಶ ಮಾಡುತ್ತಿರುವುದು ಅಲ್ಲಿಯ ಭಕ್ತರ ಕಣ್ಣಿಗೆ ಬಿದ್ದಿದೆ. ಈ ಅಚ್ಚರಿಯ ದೃಶ್ಯವನ್ನು ಭಕ್ತರೊಬ್ಬರು ತಮ್ಮ ಮೊಬೈಲ್‌ ಫೋನಿನಲ್ಲಿ ಚಿತ್ರಿಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಳಿಲು ಕ್ಷೇತ್ರದಲ್ಲಿ ಸುಬ್ರಹ್ಮಣ್ಯನ ಯಾವುದೇ ಶಿಲಾಮೂರ್ತಿ ಇರುವುದಿಲ್ಲ ಇಲ್ಲಿ ಉದ್ದವ ಹುತ್ತಕ್ಕೆ ನಿತ್ಯಪೂಜೆ ನಡೆಯುತ್ತದೆ. ದೇವಾಲಯದ ಈ ಹುತ್ತದಲ್ಲಿ ಸುಬ್ರಹ್ಮಣ್ಯ ನಾಗರಹಾವಿನ ರೂಪದಲ್ಲಿ ನೆಲೆಯಾಗಿದ್ದಾನೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಇದಕ್ಕೆ ಪುಷ್ಟಿನೀಡುವಂತೆ ನಾಗ ಸಾರ್ವಜನಿಕರಿಗೆ ದರ್ಶನ ನೀಡಿದ್ದಾನೆ. ಗರ್ಭಗುಡಿಯ ದಕ್ಷಿಣ ದಿಕ್ಕಿನಲ್ಲಿರುವ ಸಣ್ಣ ಪ್ರದೇಶ ದ್ವಾರದ ಮೂಲಕ ನಾಗರಾಜ ಒಳ ಪ್ರದೇಶ ಮಾಡುತ್ತಿರುವುದು ಕಂಡು ಬಂದಿದ್ದು ಭಕ್ತರು ಪುಳಕಿತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಐತಿಹ್ಯ

ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಇರುವ ದೇವಸ್ಥಾನದ ಆರಂಭದಲ್ಲಿ ಮುಳಿಹುಲ್ಲಿನಿಂದ ನಿರ್ಮಿತವಾಗಿತ್ತು. ಬಳಿಕ 1956 ರಲ್ಲಿ ಮುಳಿ ಮಾಡು ತೆಗೆದು ಹಂಚಿನ ಮಾಡು ನಿರ್ಮಿಸಲಾಯಿತು. ಬಳಿಕ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳು ಶ್ರೀದೇವರ ಪ್ರತಿಷ್ಠಾಪನೆ ಮಾಡಿದ್ದರು. 2004 ರಲ್ಲಿ ಜೀರ್ಣೋದ್ಧಾರಗೊಂಡು, ಬ್ರಹ್ಮಕಲಶೋತ್ಸವ ನಡೆದಿತ್ತು. ಬಳಿಕ ದಿನಗಳಲ್ಲಿ ಅರ್ಚಕರ ಮನೆ, ಅತಿಥಿಗೃಹ, ಪಾಕಶಾಲೆ, ಅನ್ನಛತ್ರ ಹೀಗೆ ಇಂದಿನ ತನಕ ಸುಮಾರು ನಾಲ್ಕು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯ ನಡೆದಿದೆ. ಸಂತಾನ ಭಾಗ್ಯ, ಕಂಕಣ ಭಾಗ್ಯ, ಸರ್ಪದೋಷ ನಿವಾರಣೆ ಮುಂತಾದವುಗಳ ಕುರಿತು ಪ್ರಾರ್ಥಿಸಿದ ಭಕ್ತರಿಗೆ ದೇವರ ಅನುಗ್ರಹ ದೊರೆತ ಕಾರಣೀಕತೆ ಇಲ್ಲಿಯದು.