Monday, January 20, 2025
ಸುದ್ದಿ

ಪತ್ನಿಯಿಂದ ‘ಕರಿಮಣಿ ಮಾಲೀಕ ನೀ ನಲ್ಲ’ ಹಾಡಿಗೆ ರೀಲ್ಸ್ : ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ – ಕಹಳೆ ನ್ಯೂಸ್

ಚಾಮರಾಜನಗರ: ಇತ್ತೀಚೆಗೆ ‘ಕರಿಮಣಿ ಮಾಲೀಕ ನೀ ನಲ್ಲ’ ಎಂಬ ಹಾಡಿನ ರೀಲ್ಸ್ ಸಿಕ್ಕಪಟ್ಟೆ ಟ್ರೆಂಡ್ ಆಗಿದ್ದು ಲಕ್ಷಾಂತರ ಜನ ಈ ಹಾಡಿಗೆ ರೀಲ್ಸ್ ಮಾಡ್ತಾ ಇದ್ದಾರೆ. ಆದರೆ ಹೀಗೇ ‘ಕರಿಮಣಿ ಮಾಲೀಕ ನೀ ನಲ್ಲ’ ಎಂದು ರೀಲ್ಸ್ ಮಾಡಿದ್ದ ಮಹಿಳೆ ಈಗ ತನ್ನ ಕರಿಮಣಿಯನ್ನೇ ಕಳೆದುಕೊಂಡಿದ್ದಾಳೆ. ಆ ಹಾಡಿಗೆ ಪತ್ನಿ ಮಾಡಿದ ರೀಲ್ಸ್ ಕಾರಣಕ್ಕೆ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಈ ಘಟನೆ ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಮಾರ್ (33) ಎಂಬಾತ ಈ ಹಾಡಿಗೆ ಹೆಂಡತಿ ಮಾಡಿದ ರಿಲ್ಸ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ರೀಲ್ಸ್ ಗೀಳು ಬೆಳೆಸಿಕೊಂಡಿದ್ದ ಪತ್ನಿ ರೂಪಾ ತನ್ನ ಸೋದರಮಾವ ಹಾಗೂ ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಈ ರೀಲ್ಸ್ ನೋಡಿದ ಕುಮಾರ್ ಸ್ನೇಹಿತರು ತಲೆಗೊಂದು ಮಾತನಾಡಿದ್ದರು. ಹೀಗಾಗಿ ರೀಲ್ಸ್ ಡಿಲೀಟ್ ಮಾಡುವಂತೆ ಕುಮಾರ್ ಪತ್ನಿ ರೂಪಾಳಿಗೆ ಒತ್ತಾಯ ಮಾಡಿದ್ದಾನೆ. ಆದರೆ ನನಗೆ ರೀಲ್ಸ್ ಮಾಡುವ ಸ್ವಾತಂತ್ರ‍್ಯ ಇಲ್ಲವಾ ಎಂದು ಮರು ಪ್ರಶ್ನೆ ಮಾಡಿದ್ದ ರೂಪಾ ಗಂಡನ ಜೊತೆ ಜಗಳ ಮಾಡಿಕೊಂಡಿದ್ದಾಳೆ. ರೀಲ್ಸ್ನಿಂದ ಗ್ರಾಮದ ಜನರು ಮಾತನಾಡುವ ವಿಚಾರ ಪತ್ನಿ ರೂಪಾ ಗಮನಕ್ಕೆ ತಂದ್ರೂ ಕ್ಯಾರೆ ಅಂದಿರಲಿಲ್ಲ. ಹೀಗಾಗಿ ಕೊನೆಗೆ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.