ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಕರಿಮಣಿ ಉತ್ಸವಕ್ಕೆ ಚಾಲನೆ – ಕಹಳೆ ನ್ಯೂಸ್
ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಇಂದಿನಿAದ 15 ದಿನಗಳ ಕಾಲ `ಕರಿಮಣಿ ಉತ್ಸವ’ ನಡೆಯಲಿದೆ.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಮಾಂಗಲ್ಯದಲ್ಲಿ ಮಂಗಲ ಶಬ್ದವಿದೆ. ಮಂಗಲವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂಗಳಸೂತ್ರವನ್ನು ಧರಿಸಿದಾಗಲೇ ಮುತ್ತೈದೆಭಾಗ್ಯದ ಜೊತೆಗೆ ಗೃಹಿಣಿಗೆ ಸಂಸ್ಕಾರ ದೊರೆಯುತ್ತದೆ ಹಾಗೂ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಗಳು ದೊರೆಯಲಿ ಎಂದು ಹೇಳಿದರು.
ಬಳಿಕ ಮಾತನಾಡಿದ ಮುಳಿಯ ಜ್ಯುವೆಲ್ಸ್ ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಫೆ.16ರಿಂದ ಫೆ.29ರವರೆಗೆ `ಕರಿಮಣಿ ಉತ್ಸವ’ ನಡೆಯಲಿದ್ದು, ಚಿನ್ನಾಭರಣಗಳ ಮಾರುಕಟ್ಟೆಯಲ್ಲಿ ಹಲವು ಹೊಸತನಗಳನ್ನು ಮುಳಿಯ ಜ್ಯುವೆಲ್ಸ್ ಸಂಸ್ಥೆ ಪರಿಚಯಿಸಿದೆ, ಹಾಗೂ ಆಧುನಿಕತೆಯಲ್ಲಿ ಮಹಿಳೆಯರಿಗೆ ವಿವಿಧ ಕಾರ್ಯಕ್ರಗಳಿಗೆ ತಕ್ಕಂತೆ ಅವರವರ ಮನದಿಚ್ಚೆಯ ಕರಿಮಣಿಗಳನ್ನು ಧರಿಸಲು ಅವಕಾಶವಿದೆ. ಇದಕ್ಕಾಗಿ ಕರಿಮಣಿ ಉತ್ಸವದ ಮೂಲಕ ಹೊಸ ಹೊಸ ಶೈಲಿಯ, ಆಕರ್ಷಕ ವಿನ್ಯಾಸದ ಕರಿಮಣಿಗಳು ಉತ್ಸವದಲ್ಲಿ ಲಭ್ಯವಿದೆ ಎಂದು ತಿಳಿಸಿದರು. ಈ ಕರಿಮಣಿ ಉತ್ಸವÀನ್ನು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಮುಳಿಯ ಜ್ಯುವೆಲ್ಸ್ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ನಿರ್ದೇಶಕಿ ಕೃಷ್ಣವೇಣಿ ಮುಳಿಯ, ಶೋರೂಂ ವ್ಯವಸ್ಥಾಪಕ ರಾಘವೇಂದ್ರ ಪಾಟೀಲ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವ್ಯಶ್ರೀ ಪ್ರಾರ್ಥಿಸಿದರು. ಯತೀಶ್ ಆಚಾರ್ಯ ಸ್ವಾಗತಿಸಿರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.