Tuesday, January 21, 2025
ಸುದ್ದಿ

ಪುತ್ತೂರು : ಫೆ.20ರಂದು ಸಾಲ ಮನ್ನಾ ವಂಚಿತ ರೈತರ ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕ ಸರಕಾರ 2018ರ ಸಹಕಾರಿ ಸಂಘ ಸೊಸೈಟಿ ಬ್ಯಾಂಕ್ ಇತ್ಯಾದಿ ಗಳಿಂದ ಸಾಲ ಮನ್ನಾ ಪರಿಹಾರದ ಮೊಬಲಗು ದೊರಕದ ರೈತರ ಪರವಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಘಟನೆಯು ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಪುತ್ತೂರು ಕಂದಾಯ ಉಪ ವಿಭಾಗ ಕಚೇರಿ ಎದುರುಗಡೆ ಫೆ .20ರಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಶಿರಾಡಿ ಬುಧವಾರ ಸುಬ್ರಹ್ಮಣ್ಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಈಗ ಆಧುನಿಕ ತಂತ್ರಜ್ಞಾನ ಇಷ್ಟು ಮುಂದುವರಿದರು ಸರಕಾರದ ಸಾಲ ಮನ್ನಾ ಯೋಜನೆಗಳು ಮತ್ತು ಇನ್ನಿತರ ಯೋಜನೆಗಳು ಅರ್ಹತೆ ಇರುವ ರೈತರಿಗೆ ಸಿಗದಿರುವುದು ಈ ರಾಜ್ಯದ ರೈತರ ವಿಪರ್ಯಾಸ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳುಗಳ ವಿರುದ್ಧ ಮತ್ತು ಸಾಲ ಮನ್ನಾ ವಂಚಿತ ರೈತರಿಗೆ ಸಾಲಮನ್ನಾದ ಒಂದು ಲಕ್ಷ ರೂ ಹಣ ಸಿಗದಿರುವ ಸಿಗುವ ತನಕ ಈ ಹೋರಾಟ ಮುಂದುವರೆಯಲಿದೆ ಎಂದು ಕಿಶೋರ್ ಶಿರಾಡಿ ಅವರು ಹೇಳಿದರು. ಪ್ರತಿಭಟನೆ ದಿನ ಸಂಬAಧಪಟ್ಟ ಡಿಸಿ ಬ್ಯಾಂಕಿನ ಅಧ್ಯಕ್ಷರು ನಿರ್ದೇಶಕರು ಹಾಗೂ ಬ್ಯಾಂಕಿನ ಅಧಿಕಾರಿಗಳು ನಮ್ಮ ಮನೆ ಸ್ವೀಕರಿಸಲು ಸ್ಥಳಕ್ಕೆ ಬರಬೇಕು ಹಾಗೂ ರೈತರಿಗೆ ಸಿಗಬೇಕಾದ ಹಣ ಎಲ್ಲಿದೆ ಯಾಕಾಗಿ ಹೀಗಾಗಿದೆ ಎಂಬುದರ ಬಗ್ಗೆ ಉತ್ತರ ನೀಡಬೇಕು ಎಂದು ಅವರು ಅಗ್ರಹಿಸಿದರು. ಅಲ್ಲದೆ ಸಾಲ ಮನ್ನಾ ಯೋಜನೆ ಆರಂಭವಾಗಿ ಆರು ವರ್ಷ ಆಗಿದೆ ,ರೈತರು ಇಲ್ಲಿಯವರೆಗೆ ಕಾದು ಕಾದು ಕಂಗಳಾಗಿದ್ದರೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಚಾಲಕ ಜಯಪ್ರಕಾಶ್ ಕೂಜುಗೋಡು, ಸದಸ್ಯರುಗಳಾದ ಮೋಹನ ಕೆದಿರ, ರಮೇಶ್ ಎಂ. ಎಸ್, ಹೂವಯ್ಯ ಕಲ್ಲೇರಿ ,ಪ್ರವೀಣ ಕೋನಡ್ಕ, ಎಂ ಮುತ್ತಪ್ಪ ಗೌಡ, ಡಿ ಲಿಂಗಪ್ಪಗೌಡ, ನರೇಂದ್ರ ಕೂಜುಗೋಡು ಹಾಗೂ ಲೋಕೇಶ್ ಕೋನಡ್ಕ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು