Saturday, November 23, 2024
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಶಾಸಕರಿಬ್ಬರ ಅಮಾನತ್ತಿಗೆ ಐವಾನ್ ಮನವಿ : ಕಾಂಗ್ರೆಸ್ ಶಾಸಕರ ಕೇಸುಗಳನ್ನು ಏನು ಮಾಡುತ್ತೀರಿ : ಶಾಸಕ ಡಾ.ಭರತ್ ಶೆಟ್ಟಿ ತಿರುಗೇಟು– ಕಹಳೆ ನ್ಯೂಸ್

ಕಾವೂರು: ಕೇಸು ದಾಖಲಾದವರನ್ನು ಅಮಾನತು ಮಾಡುತ್ತಾ ಹೋದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಬೆಂಚುಗಳು ಖಾಲಿಯಾಗಲಿವೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ.

ಕಾಂಗ್ರೆಸ್ ನ ಉಪಾಧ್ಯಕ್ಷ ಐವಾನ್ ಡಿಸೋಜ ಹಾಗೂ ಕೆಲವರು ಸ್ಪೀಕರ್ ಯು.ಟಿ ಖಾದರ್ ಅವರಿಗೆ ತನ್ನನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರನ್ನು ಅಮಾನತು ಮಾಡುವಂತೆ ಮನವಿ ಮಾಡಿದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಮುವಾದ ಕೇವಲ ಬಿಜೆಪಿಗೆ ಹಿಂದುಗಳಿಗೆ ಎಂದು ಲೇಬಲ್ ಅಂಟಿಸಿದಂತಿದೆ. ಶಾಲೆಯ ಶಿಕ್ಷಕಿಯ ತಪ್ಪು ತಿಳಿದೂ, ಸಮುದಾಯದ ಪರವಾಗಿ ಮಾತನಾಡುವ ಡಿಸೋಜಾ ಕೂಡ ಓರ್ವ ಕೋಮುವಾದಿಯಾಗಿದ್ದಾರೆ. ಹಲವಾರು ಪ್ರಕರಣದಲ್ಲಿ ಇದು ಸಾಬೀತಾಗಿದೆ ನಾವೂ ಕೂಡ ಅವರನ್ನು ಗಡಿಪಾರು ಮಾಡಿ ಎಂದು ಒತ್ತಾಯಸಬಹುದು ಎಂದು ತಿರುಗೇಟು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಡಿಪಿಐ ಕಚೇರಿಗೆ ಮನವಿ ಕೊಡಲು ಹೋಗಿದ್ದ ನನ್ನ ಹಾಗೂ ಶರಣ್ ಪಂಪ್ ವೆಲ್ ಮೇಲೂ ಕೇಸು ಹಾಕಲಾಗಿದೆ.ಮನವಿ ನೀಡುವ ,ಹೇಳಿಕೆ ವೀಡಿಯೋ ತಿರುಚಿ ಫಾರ್ವರ್ಡ್ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೆದರುವ ಪ್ರಶ್ನೆಯಿಲ್ಲ.ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.