Recent Posts

Monday, January 20, 2025
ಸುದ್ದಿ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ಭಂಡಿರಥ ರಚನೆಗೆ ಬ್ರಹ್ಮರಥ ನಿರ್ಮಿಸಿದವರಿಗೆ ವೀಳ್ಯ ನೀಡಿಕೆ : ಹೈದರಬಾದ್ ಮೂಲದ ಸಾಯಿ ಶ್ರೀನಿವಾಸ್ ರಿಂದ ಕೊಡುಗೆ – ಕಹಳೆ ನ್ಯೂಸ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ಭಂಡಿರಥವನ್ನು ದಾನಿಯೊಬ್ಬರು ಕೊಡುಗೆಯಾಗಿ ನೀಡಲಿದ್ದುಬ್ರಹ್ಮರಥ ನಿರ್ಮಿಸಿದ ಕೋಟೇಶ್ವರದವರಿಗೆ ರಥ ನಿರ್ಮಿಸಲು ಫೆ.12 ರಂದು ವೀಳ್ಯ ನೀಡಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೋಹನದಾಸ್ ರೈ ಅವರ ಅಪ್ತರಾಗಿದ್ದ ಹೈದರಬಾದ್ ಮೂಲದ ಸಾಯಿ ಶ್ರೀನಿವಾಸ್ ಇತ್ತಿಚೆಗೆ ದೇವಾಲಯಕ್ಕೆ ಆಗಮಿಸಿದ್ದ ಸಂದರ್ಭ ಈ ಕೊಡುಗೆ ಘೋಷಣೆ ಮಾಡಿದ್ದರು. ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರಿಗೆ ಶ್ರೀನಿವಾಸ್ ನಿರ್ದೇಶನದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು ಹಾಗೂ ಸುಬ್ರಹ್ಮಣ್ಯದ ಮೋಹನದಾಸ ರೈ 12,50,001.00 ಹಣ ಪಾವತಿಸಿ ರಥ ನಿರ್ಮಿಸಲು ವೀಳ್ಯ ನೀಡಲಾಗಿದೆ. ಮೇ.2 ನೇ ವಾರದಲ್ಲಿ ರಥದ ಕೆಲಸ ಪೂರ್ಣವಾಗಲಿದ್ದು ಇದು 16 ಅಡಿ ಎತ್ತರ ಇರಲಿದೆ ಎಂದು ತಿಳಿದು ಬಂದಿದೆ. ಶ್ರೀನಿವಾಸ್ ಅವರು ಅನ್ನದಾನಕ್ಕೂ 2 ಲಕ್ಷ ಹಣ ಕೊಡುಗೆಯನ್ನು ನೀಡಿದ್ದಾರೆ.