Recent Posts

Sunday, January 19, 2025
ಸುದ್ದಿ

ಉಪ್ಪಿನಂಗಡಿ: ಕೋರಿಯರ್ ನಿವಾಸಿ ನೇಣು ಬಿಗಿದು ಆತ್ಮಹತ್ಯೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಮೊಗ್ರು ಗ್ರಾಮದ ಕೋರಿಯರ್ ನಿವಾಸಿಯೋರ್ವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಮೊಗ್ರು ಗ್ರಾಮದ ಕೋರಿಯರ್ ನಿವಾಸಿ ಹರೀಶ್ (40) ಮೃತಪಟ್ಟವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಪದ್ಮುಂಜದ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದವರು ಕೆಲ ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಬಂದಾರುನಲ್ಲಿರುವ ಪತ್ನಿ ಮನೆಗೆ ಹೋಗಿ ಅಲ್ಲಿಂದ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಕೆಲಸಕ್ಕೆ ಹೋಗದೆ, ತನ್ನ ಮನೆಗೆ ಹೋಗಿ ಫೆ.16ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹರೀಶ್ ಅವರ ಪತ್ನಿ ಲೋಲಾಕ್ಷಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು