Recent Posts

Sunday, January 19, 2025
ಸುದ್ದಿ

ಲಿಟ್ಲ್ ಫ್ಲವರ್ ಶಾಲೆಯಲ್ಲಿ ಪರೀಕ್ಷೆ ಬರೆಯುವ ತರಬೇತಿ ಕಾರ್ಯಗಾರ – ಕಹಳೆ ನ್ಯೂಸ್

ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಪರೀಕ್ಷೆಗೆ ತಯಾರಿ ಬಗೆಗಿನ ಕಾರ್ಯಗಾರವನ್ನು, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಭಟ್ ಪ್ರಾಸ್ತವಿಕವಾಗಿ ಮಾತನಾಡಿ “ಪರೀಕ್ಷೆ ಎಂದಾಗ ಯುದ್ಧಕಾಲ ಶಸ್ತ್ರ ಅಭ್ಯಾಸ ಆಗ್ಬಾರ್ದು. ಪ್ರತಿ ದಿನ ಶಾಲಾ ಕೆಲಸ ನಿಯಮಿತವಾಗಿ ನಡೆಯಬೇಕು.ಪರೀಕ್ಷೆಯನ್ನು ಖುಷಿಯಲ್ಲಿ ಎದುರಿಸಬೇಕು “ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ಹಾಗೂ ಪತ್ರಕರ್ತರಾದ ಸಂಶುದ್ದೀನ್ ಸಂಪ್ಯ ಮಾತನಾಡಿ ” ಪ್ರತಿ ಮಗು ಮತ್ತು ಪೋಷಕರು ಬೆಳಗ್ಗೆಯಿಂದ ಸಂಜೆ ತನಕ ಸಮಯದ ಪಟ್ಟಿಯನ್ನು ತಯಾರಿಸಿ ಎಲ್ಲಾ ಪಾಠಗಳು ಓದುವ ಹಾಗೆ ತಯಾರಿ ಮಾಡಿಕೊಂಡು ಒತ್ತಡ ರಹಿತ ಓದಿನ ಕಡೆ ಗಮನ ಕೊಡಬೇಕು ಮತ್ತು ಮೊಬೈಲ್ ಬಿಟ್ಟು ಕಲಿಕೆ ಕಡೆ ಗಮನ ಜಾಸ್ತಿ ಆಗಲಿ” ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಸ್ವಾಗತಿಸಿ, ಶಿಕ್ಷಕಿ ದೀಕ್ಷಾ ವಂದಿಸಿದರು. ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು