Sunday, January 19, 2025
ಸುದ್ದಿ

ಫೆ 22ರಿಂದ ಸಪರಿವಾರ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ – ಕಹಳೆ ನ್ಯೂಸ್

ಫೆ 22ರಂದು ಸಪರಿವಾರ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ    ನಡೆಯಲಿದ್ದು, ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿದೈವ ಮತ್ತು ಗುಳಿಗ ದೈವಗಳ ನೇಮೋತ್ಸವವು ವಿವಿಧ ಧರ‍್ಮಿಕ ಕರ‍್ಯಕ್ರಮದೊಂದಿಗೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಗುರುವಾರ ಬೆಳಿಗ್ಗೆ 8-30ಕ್ಕೆ ದೇವತಾ ಪ್ರರ‍್ಥನೆ, ಆಚರ‍್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಸಾನಿಧ್ಯ ಕಲಶ ಪೂಜೆ, ಕಲಶಾಭಿಷೇಕ, ತಂಬಿಲ ಸೇವೆ, ನಾಗಬನದಲ್ಲಿ ತಂಬಿಲ ಸೇವೆ, ಮಂಗಳಾರತಿ, ಹೊರೆಕಾಣಿಕೆ ಸರ‍್ಪಣೆ , ನಡೆದ ಬಳಿಕ ಅನ್ನಸಂರ‍್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ ಸಂಜೆ 5-30ಕ್ಕೆ ಅತ್ತೆಜಾಲು ಭಂಡಾರದ ಮನೆಯಿಂದ ಮಾಡತ್ತಾರು ದೈವಸ್ಥಾನಕ್ಕೆ ಭಂಡಾರ ಬರುವುದು ಹಾಗೂ ಕ್ಷೇತ್ರದಲ್ಲಿ ಭಂಡಾರ ಏರಿ ತಂಬಿಲ ಸೇವೆ, ಎಣ್ಣೆ ಬೂಳ್ಯ ನಡೆದ ನಂತರ ಭೋಜನ ವ್ಯವಸ್ಥೆ ನಡೆಯಲಿದೆ.