Recent Posts

Sunday, January 19, 2025
ಸುದ್ದಿ

ಹದಿನಾರು ಅಡಿ ಆಳದ ಪಾಳು ಬಾವಿಗಿಳಿದು 3 ಹೆಬ್ಬಾವುಗಳ ರಕ್ಷಣೆ – ಕಹಳೆ ನ್ಯೂಸ್

ಮಂಗಳೂರು: ಸುಮಾರು ಹದಿನಾರು ಅಡಿ ಆಳದ ಪಾಳು ಬಾವಿಯಲ್ಲಿದ್ದ ಹೆಬ್ಬಾವುಗಳನ್ನು ಸಾಹಸದಿಂದ ರಕ್ಷಣೆ ಮಾಡಿದ ಘಟನೆ ಮಂಗಳೂರಿನ ಅಶೋಕ ನಗರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಶೋಕ ನಗರದಿಂದ ಕೋಡಿಕಲ್ ರಸ್ತೆಯ ನಡುವೆ ಇದ್ದ ನವೀನ್ ಕರ್ಡೋಸ ಎಂಬವರ ಜಮೀನಿನ ಪಾಳು ಬಾವಿಯಲ್ಲಿ ಮೂರು ಹೆಬ್ಬಾವುಗಳು ಪತ್ತೆಯಾಗಿತ್ತು. ಪಾಳು ಬಾವಿಯನ್ನು ಮಣ್ಣು ಹಾಕಿ ಮುಚ್ಚುವ ಯೋಚನೆಯಲ್ಲಿದ್ದ ನವೀನ್ ಕರ್ಡೋಸ ಅವರಿಗೆ ಬಾವಿಯಲ್ಲಿ ಹಾವುಗಳು ಇರುವುದು ಗೊತ್ತಾಗಿತ್ತು. ಹೀಗಾಗಿ ಸ್ಥಳೀಯ ಭುವನ್ ದೇವಾಡಿಗ ಎಂಬವರಿಗೆ ಕರೆ ಮಾಡಿ ಹಾವುಗಳನ್ನ ರಕ್ಷಣೆ ಮಾಡಲು ಕರ್ಡೋಸ ಅವರು ಕೇಳಿಕೊಂಡಿದ್ದರು. ಹೀಗಾಗಿ ಸ್ನೇಹಿತರಾಗಿರುವ ಅಜಯ್ ಕುಲಾಲ್ ಹಾಗೂ ಜೀತ್ ರಾಜ್ ಅವರ ಜೊತೆ ಸೇರಿ ಭುವನ್ ದೇವಾಡಿಗ ಹೆಬ್ಬಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಬಾವಿಗೆ ಏಣಿ ಇಳಿಸಿ ಇಳಿದು ಮಣ್ಣು ಸರಿಸಿ ಬಿಲದ ಒಳಗಿದ್ದ ಮೂರು ಹೆಬ್ಬಾವುಗಳನ್ನು ಪತ್ತೆ ಹಚ್ಚಿದ್ದಾರೆ. ಎರಡು ಹೆಬ್ಬಾವುಗಳನ್ನು ರಕ್ಷಣೆ ಮಾಡಿದ್ದು, ಮತ್ತೊಂದು ಹೆಬ್ಬಾವು ಬಿಲದ ಒಳಗೆ ಕೈಗೆ ಸಿಗಲಾರದಷ್ಟು ಒಳಗೆ ಹೋಗಿದೆ. ಹೀಗಾಗಿ ಸುಮಾರು ಒಂದು ಘಂಟೆಯ ಕಾರ್ಯಾಚರಣೆ ನಡೆಸಿ ಎರಡು ಹೆಬ್ಬಾವುಗಳನ್ನು ರಕ್ಷಣೆ ಮಾಡಿ ನೀರು ಇರುವ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಇನ್ನೊಂದು ಹೆಬ್ಬಾವನ್ನೂ ಕೂಡಾ ಶೀಘೃ ರಕ್ಷಣೆ ಮಾಡುವುದಾಗಿ ಭುವನ್ ದೇವಾಡಿಗೆ ಬರವಸೆ ನೀಡಿದ್ದಾರೆ. ಸ್ಥಳಿಯರು ಹೆಬ್ಬಾವು ರಕ್ಷಣೆ ಕಾರ್ಯದಲ್ಲಿ ಸಹಾಯ ಮಾಡಿದ್ದು, ಭುವನ್ ಹಾಗೂ ಅವರ ಸ್ನೇಹಿತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.