ಮಾ.24ರಂದು ವಿಶ್ವ ಹಿಂದೂ ಬಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ ವತಿಯಿಂದ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದ್ವಿತೀಯ ಬಾರಿಗೆ ಸೂರ್ಯ ಬೆಳಕಿನ ಪುರುಷರ ಪ್ರೋ ಮಾದರಿಯ ಮ್ಯಾಟ್ ಅಂಕಣದ ಕಬ್ಬಡಿ ಪಂದ್ಯಾಟ – ಕಹಳೆ ನ್ಯೂಸ್
ಪುತ್ತೂರು : ವಿಶ್ವಹಿಂದೂ ಪರಿಷದ್, ಬಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ ಮತ್ತು ಪುತ್ತೂರು ಗ್ರಾಮಂತರ ಪ್ರಖಂಡ ಇದರ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದ್ವಿತೀಯ ಬಾರಿಗೆ ಸೂರ್ಯ ಬೆಳಕಿನ 55 ಕೆ.ಜಿ.ವಿಭಾಗದ ಪುರುಷರ ಪ್ರೋ ಮಾದರಿಯ ಮ್ಯಾಟ್ ಅಂಕಣದ ಕಬ್ಬಡಿ ಪಂದ್ಯಾಟ ಮಾ.24ರಂದು ನಡೆಯಲಿದೆ.
ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಾಂಜನೇಯ ತಿಂಗಳಾಡಿ ಘಟಕದ ಸಂಯೋಜಕರಾದ ಶ್ರೀ ಕಿಶನ್ ತ್ಯಾಗರಾಜನಗರ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರೂ ಹಾಗೂ ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷರಾದ ಕಡಮಜಲು ಸುಬಾಷ್ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಹಾಗೂ ಮೆಸ್ಕಾಂ ಮಂಗಳೂರು ಮಾಜಿ ನಿರ್ದೇಶಕರಾದ ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಪದ್ಮಶ್ರೀ ಸೋಲಾರ್ ಸಿಸ್ಟಮ್ ಪುತ್ತೂರಿನ ಶ್ರೀ ಸೀತಾರಾಮ ರೈ ಕೆದಂಬಾಡಿಗುತ್ತು, ಬಜರಂಗದಳ ಗ್ರಾಮಾಂತರ ಪ್ರಖಂಡದ ಸಂಯೋಜಕರಾದ ಶ್ರೀ ಅನಿಲ್ ಇರ್ದೆ, ವಿಶ್ವಹಿಂದೂ ಪರಿಷದ್ ನಗರ ಪ್ರಖಂಡದ ಉಪಾಧ್ಯಕ್ಷರಾದ ಶ್ರೀ ಶೇಷಪ್ಪ ಗೌಡ, ಬೆಳ್ಳಿಪ್ಪಾಡಿ, ತಿಂಗಳಾಡಿ ಶ್ರೀ ಕ್ಷೇತ್ರ ಭಜನಾ ಮಂದಿರ ದೇವಗಿರಿಯ ಅಧ್ಯಕ್ಷರಾದ ಶ್ರೀ ಜಯರಾಮ ರೈ, ಮಿತ್ರಂಪಾಡಿ, ಉದ್ಯಮಿ ಶ್ರೀ ಸಹಜ್ ರೈ, ತಿಂಗಳಾಡಿ ವಿಶ್ವ ಪರಿಷದ್ ಬಜರಂಗದಳ ವೀರಾಂಜನೇಯ ಘಟಕದ ಅಧ್ಯಕ್ಷರಾದ ಶ್ರೀ ಅಮರ್ ರೈ ದರ್ಬೆ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ ಮುಳಿಗದ್ದೆ, ಬೆಂಗಳೂರು ಕೆ.ಆರ್.ಪುರಂ, ತಹಶೀಲ್ದಾರ್ ಶ್ರೀ ಅಜಿತ್ ಸೊರಕೆ ಗೌರವ ಉಪಸ್ಥಿತಿಯಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದರ ಸಭಾಧ್ಯಕ್ಷರಾಗಿ ತಿಂಗಳಾಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಾಂಜನೇಯ ಘಟಕದ ಅಧ್ಯಕ್ಷರಾದ ಶ್ರೀ ಅಮರ್ ರೈ, ದರ್ಬೆ ಇವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರೋಪ ಸಮಾರಂಭದ ಗೌರವಾಧ್ಯಕ್ಷರಾಗಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಶ್ರೀ ಮುರಳೀಕೃಷ್ಣ ಹಸಂತ್ತಡ್ಕ ವಹಿಸಲಿದ್ದಾರೆ, ಹಾಗೂ ಮಂಗಳೂರು ಮೆಸ್ಕಾಂನ ಮಾಜಿ ನಿರ್ದೇಶಕರಾದ ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ಬಜರಂಗದಳ ಸಂಯೋಜಕರಾದ ಶ್ರೀ ಭರತ್ ಕುಮ್ಡೇಲು, ಪುತ್ತೂರು ಬಜರಂಗದಳ ಗ್ರಾಮಾಂತರ ಪ್ರಖಂಡ ಸಂಯೋಜಕರಾದ ಶ್ರೀ ವಿಶಾಕ್ ಸಸಿಹಿತ್ಲು, ಕೆದಂಬಾಡಿ ಗ್ರಾಮ ಪಂಚಾಯತ್‌ನ ನಿಕಪೂರ್ವ ಅಧ್ಯಕ್ಷರಾದ ಶ್ರೀ ರತನ್ ರೈ ಕುಂಬ್ರ, ಉದ್ಯಮಿ ಕೈಕಾರ ಶ್ರೀ ಸಂತೋಷ್ ಕುಮಾರ್ ರೈ, ಪುತ್ತೂರು ಬಜರಂಗದಳ ನಗರ ಪ್ರಖಂಡ ಸಂಯೋಜಕರಾದ ಶ್ರೀ ಹರೀಶ್ ದೋಳ್ಪಾಡಿ, ಪುತ್ತೂರು ಟಿ.ಎಪಿ.ಸಿ.ಎಂ.ಎಸ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ್ ರೈ, ಕೆದಂಬಾಡಿಗುತ್ತು, ಬಜರಂಗದಳ ಪುತ್ತೂರು ಗ್ರಾಮಂತರ ಪ್ರಖಂಡದ ಕಾರ್ಯದರ್ಶಿ ಶ್ರೀ ರವಿಕುಮಾರ್ ಕೈತ್ತಡ್ಕ, ಹಿಂದೂ ಜಾಗರಣಾ ವೇದಿಕೆ ಪ್ರಾಂತ ಜಿಲ್ಲಾ ಸಂಯೋಜಕರು ಶ್ರೀ ದಿನೇಶ್ ಪಂಜಿಗ, ಹಿಂದೂ ಜಾಗರಣ ವೇದಿಕೆ ಪ್ರಾಂತ ಸಮಿತಿ ಸದಸ್ಯರಾದ ಅಜಿತ್ ರೈ ಹೊಸಮನೆ, ಶ್ರೀ ಅಜಿತ್ ಭಂಡಾರಿ, ಉದ್ಯಮಿ ಮುಂಬಾಯಿ ಇವರು ಸಭಾಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.