ಸುಳ್ಯದ ಮಂಡೆಕೋಲು ಗ್ರಾಮದಲ್ಲಿ ಸಾಯುತ್ತಿರುವ ತೆಂಗಿನ ಮರಗಳು ; ಅಧಿಕಾರಿಗಳ ಭೇಟಿ, ಪರಿಶೀಲನೆ – ಕಹಳೆ ನ್ಯೂಸ್
ಸುಳ್ಯ: ಸಿರಿ ಕರಟುವ ಮೂಲಕ ಫಸಲು ಭರಿತ ತೆಂಗಿನ ಮರಗಳು ಸಾಯುತ್ತಿರುವ ಹಿನ್ನೆಲೆ ಯಲ್ಲಿ ತೋಟಗಾರಿಕೆ ಅಧಿಕಾರಿಗಳು ಸುಳ್ಯದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಡೆಕೋಲು ಗ್ರಾಮದ ಅಂಬ್ರೋಟ್ಟಿ ಪೇರಾಲು ಅಡ್ಡಂತ್ತಡ್ಕದ ಮಾಜಿ ಸೈನಿಕ ದೇರಣ್ಣ ಗೌಡ ಅವರ ತೋಟದ ಹಲವು ತೆಂಗಿನ ಮರಗಳು ಸತ್ತಿದ್ದು, ಸುಳ್ಯದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಸುಹಾನ ಮತ್ತು ಅರಬಣ್ಣ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಸುಳಿಕೊಳೆ ರೋಗದ ಲಕ್ಷಣ ಇದು ಸುಳಿಕೊಳೆ ರೋಗದ ಲಕ್ಷಣಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಗ ಬಾಧೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೃಷಿಕರಿಗೆ ಅಧಿಕಾರಿಗಳ ಮಾಹಿತಿ ನೀಡಿದ್ದು, ಇಂತಹ ರೋಗ ಬಾಧಿತ ಕೃಷಿಕರು ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನಿಯಂತ್ರಣ ಕ್ರಮ,ಔಷಧಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದಿದ್ದಾರೆ.
ದೇರಣ್ಣ ಗೌಡರ ತೋಟದಲ್ಲಿ 10 ವರ್ಷಗಳಲ್ಲಿ ಈ ರೋಗದಿಂದ 300ಕ್ಕೂ ಅ ಧಿಕ ತೆಂಗಿನ ಮರಗಳು ಸತ್ತಿವೆ. ವಾರ್ಷಿಕ 45 ಸಾವಿರ ತೆಂಗು ಸಿಗುತ್ತಿದ್ದಲ್ಲಿ ಈಗ 15 ಸಾವಿರಕ್ಕೆ ಇಳಿದಿದೆ ಎಂದು ಅವರು ಮಾಹಿತಿ ನೀಡಿದರು.