ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ; ಜೆರೋಸ ಶಾಲೆಯ ಶಿಕ್ಷಕಿಯ ವಜಾಕ್ಕೆ ಮಂಗಳೂರಿನಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್
ಮಂಗಳೂರು : ಶಾಲೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಜೆರೋಸ ಶಾಲೆಯ ಶಿಕ್ಷಕಿಯೊಬ್ಬರ ಆರೋಪದಡಿ ಶಾಸಕ ವೇದವ್ಯಾಸ್ ಕಾಮತ್ , ಡಾ. ಭರತ್ ಶೆಟ್ಟಿ ಹಾಗೂ ಹಲವರ ಮೇಲೆ ದಾಖಲಾಗಿದ್ದ ಕೇಸನ್ನು ಹಿಂಪಡೆಯುವoತೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಪ್ರತಿಭಟನೆಯನ್ನು ನಡೆಸಿತು .
ಜೆರೋಸ ಶಾಲೆಯ ಶಿಕ್ಷಕಿ ಪ್ರಭಾ ಎನ್ನುವವರು ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು. ಈ ಹಿನ್ನಲೆಯಲ್ಲಿ ಶಿಕ್ಷಕಿಯನ್ನು ವಜಾಗೊಳಿಸುಂತೆ ಆಗ್ರಹಿಸಲಾಗಿದೆ. ಈ ಸಂಬoಧ ಇಂದು ಮಂಗಳೂರಿನ ತಾಲೂಕು ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಶಿಕ್ಷಕಿಯನ್ನು ಬಂಧಿಸಬೇಕೆAದು ಪ್ರತಿಭಟನಕಾರಿಗಳು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ , ವಿ.ಹಿ.ಪಂ ಜಿಲ್ಲಾ ಪರಿಷತ್ ಘಟಕದ ಪ್ರಧಾನ ಕರ‍್ಯದರ್ಶಿ ಶೀವಾನಂದ್ ಮೆಂಡನ್ , ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪಠಿಸುತ್ತಿರುವ ಶಿಕ್ಷಕಿಯನ್ನು ಆದಷ್ಟು ಕೂಡಲೆ ವಜಾಗೊಳಿಸಬೇಕು .ಪ್ರತಿಭಟನೆ ಮಾಡಿದ ಶಾಸಕರು ಹಾಗೂ ಹಲವಾರು ಮುಖಂಡರ ಮೇಲೆ ಪ್ರಕರಣ ದಾಖಲಾಗಿದೆ ,ಈ ಬಗ್ಗೆ ಪೋಲಿಸ್ ಆಯುಕ್ತರಲ್ಲಿ ಮನವಿ ನೀಡುವಂತೆ ಅವಕಾಶವನ್ನು ಕೋರಿದರು. ಇನ್ನೂ ಪೋಲಿಸರು ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಮುನ್ನುಗ್ಗಿದ್ದಾರೆ. ಡಿಸಿಪಿ ಸಿದ್ಧಾರ್ಥ್ ಗೋಯಲ್ ಪ್ರತಿಭಟನೆಗೆ ಯಾವ ಅನುಮತಿಯೂ ತೆಗೆದುಕೊಂಡಿರಲಿಲ್ಲ ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಪೋಲಿಸ್ ವಾಹನದಲ್ಲಿ ಕಳುಹಿಸಲಾಗಿದೆ.