Saturday, November 23, 2024
ಸುದ್ದಿ

ಬಂಟ್ವಾಳ ಕಂದಾಯ ಇಲಾಖೆಯಲ್ಲಿನಡೆದ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮ –ಕಹಳೆ ನ್ಯೂಸ್

ಬಂಟ್ವಾಳ: ಬಂಟ್ಚಾಳ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ ಕರ‍್ಯಕ್ರಮ ಬಿಸಿರೋಡಿನ ಕಂದಾಯ ಇಲಾಖೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶಿಲ್ದಾರ್ ರ‍್ಚನಾ ಭಟ್ ವಹಿಸಿ ಮಾತನಾಡಿ, ಸರ್ವಜ್ಞ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಅವರು ರ‍್ವರಿಗೂ ಆರ‍್ಶಪ್ರಾಯವಾದ ಶ್ರೇಷ್ಠ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ವಜ್ಞ ನ ಶ್ರೇಷ್ಠ ಜ್ಞಾನವನ್ನು ಮುಂದಿನ ಜನಾಂಗಕ್ಕೆ ಹೇಗೆ ತಿಳಿಸಿಕೊಡಬಹುದು ಎಂಬ ವಿಚಾರದ ಬಗ್ಗೆ ಯೋಚನೆ ಮಾಡಬೇಕಾಗಿದೆ.
ಸರಕಾರ ಇಂತಹ ಶ್ರೇಷ್ಠ ವ್ಯಕ್ತಿಗಳ ಆಚರಣೆ ಮಾಡಿರುವ ಸಂಗತಿ ಅತ್ಯಂತ ಸಂತಸದ ವಿಚಾರ ಎಂದು ತಿಳಿಸಿದರು.

ವಕೀಲರಾದ ಸುರೇಶ್ ನಾವೂರ ಮಾತನಾಡಿ, ಸಮಾಜದ ಅಂಕುಡೊಂಕುಗಳ ನಿವಾರಣೆಗಾಗಿ ಹೋರಾಟ ಮಾಡಿದ ಮಹಾನುಭಾವ ಸರ್ವಜ್ಞ ರು ಎಂದು ಅವರು ತಿಳಿಸಿದರು.

ಇಂತಹ ಶ್ರೇಷ್ಠ ವ್ಯಕ್ತಿಗಳ ವ್ಯಕ್ತಿತ್ವವನ್ನು, ಆರ‍್ಶಗಳನ್ನು ಅಳವಡಿಸಿಕೊಂಡರೆ ಜೀವನ ಮೌಲ್ಯ ವೃದ್ದಿಯಾಗುತ್ತದೆ,ಕರ‍್ಯಕ್ರಮಗಳು ರ‍್ಥಪರ‍್ಣವಾಗಬಹುದು ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಯುವ ವೇದಿಕೆ ಅದ್ಯಕ್ಷ ನಿತೀಸ್ ಪಲ್ಲಿಕಂಡ, ರಾಜ್ಯ ಕುಲಾಲ ಕುಂಬಾರ ಮಹಿಳಾ ಸಂಘದ ಅದ್ಯಕ್ಷೆ ನಳಿನಿಮಹಾಬಲ ಯುವ ವೇದಿಕೆ ಮಹಿಳಾ ಸಂಘದ ಅಧ್ಯಕ್ಷೆ ವಿಜಯಶ್ರೀ ಪುರುಷೋತ್ತಮ , ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರನಾಥ ಮಿತ್ತೂರು, ಉಪತಹಶೀಲ್ದಾರ್ ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕ ವಿಜಯ ಆರ್,ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನರ‍್ವಾಹಕ ವಿಷು ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕಂದಾಯ ನಿರೀಕ್ಷಕ ಜನರ‍್ದನ ಜೆ.ಸ್ವಾಗತಿಸಿದರು.
ಶ್ರೀಕಲಾ ವಂದಿಸಿದರು.

ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಕರ‍್ಯಕ್ರಮ ನಿರೂಪಿಸಿದರು.