ವಿಶ್ವದಲ್ಲಿ ಬೇರೆ ಬೇರೆ ದಿನಗಳಿಗೇನು ಕಮ್ಮಿಯಿಲ್ಲ. ಇಂದು ಕೂಡ ಒಂದು ವಿಶೇಷ ದಿನವಾಗಿದೆ ಅದೇನೆಂದ್ರೆ ಇಂದು ಅಂತರಾಷ್ಟ್ರೀಯ ಸ್ಟಟರಿಂಗ್ ಜಾಗೃತಿ ದಿನವಾಗಿದೆ.
1998ರಿಂದ ಈ ದಿನವನ್ನು ಆಚರಣೆಗೆ ತರಲಾಯಿತು. ಸ್ಟಟರಿಂಗ್ ಅಂದ್ರೆ ತೊದಲುವಿಕೆ ಎಂದರ್ಥ. ತೊದಲಿಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಲೆಂದು ಅಕ್ಟೋಬರ್ 22ರನ್ನು ಆರಿಸಲಾಯಿತು. ಈ ದಿನದಂದು ಸ್ವಸಹಾಯ ಗುಂಪುಗಳು ಮತ್ತು ರಾಷ್ಟ್ರೀಯ ಸಂಘಗಳು ಸಕ್ರಿಯವಾಗಿ ಮತ್ತು ಸೃಜನಶೀಲವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೆ.
ಅನೇಕ ದೇಶಗಳಲ್ಲಿ ದೊಡ್ಡ ಮಾಧ್ಯಮ ಪ್ರಸಾರವಿದೆ. ಸ್ವಸಹಾಯ ಗುಂಪುಗಳು ಮತ್ತು ವೃತ್ತಿಪರರಿಂದ ತೊದಲುತ್ತಿರುವ ಜನರು ಟಿವಿ ಸಂದರ್ಶನ ಮಾಡುತ್ತಾರೆ. ಅತ್ಯುತ್ತಮ ಯೋಜನೆಗಳು, ಆಸಕ್ತಿದಾಯಕ ಚರ್ಚೆಗಳು ಈ ದಿನದಂದು ವಿಶ್ವದಾದ್ಯಂತ ಸಂಭವಿಸುತ್ತವೆ.
ಇಂಟರ್ನ್ಯಾಷನಲ್ ಸ್ಟಟರ್ರಿಂಗ್ ಜಾಗೃತಿ ದಿನವು ವೃತ್ತಿಪರರ ಜೊತೆಯಲ್ಲಿ ತೊದಲುವಿಕೆಯ ಸಮುದಾಯದ ಮುಂದಿನ ಭವಿಷ್ಯದ ಸಹಕಾರಕ್ಕಾಗಿ ಉತ್ತಮ ಮಾದರಿಯಾಗಿದೆ.