Sunday, January 19, 2025
ಕಡಬಸುದ್ದಿ

ಕಡಬ: ಕುಡಿದ ಅಮಲಿನಲ್ಲಿ ಅವಾಂತರ ಸೃಷ್ಟಿಸಿದ ವಿಎ : ಕೆಎಸ್ ಆರ್ ಟಿಸಿ ಬಸ್ ಸೀಟ್ ಅಡಿಯಲ್ಲಿ ಸಕತ್ ನಿದ್ರೆ – ಕಹಳೆ ನ್ಯೂಸ್

ಕಡಬ: ಕುಡಿತದ ಚಟಕ್ಕಾಗಿ ಹಲವು ಬಾರಿ ಹಿರಿಯ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ವಿಎ ಫೆ.20ರಂದು ಮತ್ತೆ ಕುಡಿದು ಅವಾಂತರ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ.


ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿಎ ಕುಡಿದ ಅಮಲಿನಲ್ಲಿ ಬಸ್ ನಲ್ಲಿ ಬಿದ್ದುಕೊಂಡಿದ್ದಾನೆ. ಇದೆಲ್ಲಾ ನಡೆದದ್ದು, ಸುಬ್ರಹ್ಮಣ್ಯ- ಕಡಬ ಬಸ್ ನಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ವಿಎ ನಾಗಸುಂದರ ಕುಡಿದು ಬಸ್ ಸೀಟ್ ಅಡಿಯಲ್ಲಿ ಮಲಗಿ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದ್ದ. ಹೀಗಾಗಿ ಬಸ್ ಚಾಲಕ ನೆರವಾಗಿ ಬಸ್ಸನ್ನು ಕಡಬ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಸ್ಟೇಷನ್ ಪೊಲೀಸರ ಸಹಾಯದಿಂದ ವಿಎ ಯನ್ನು ಇಳಿಸಿ ಬಸ್ ಮುಂದೆ ಹೋಗಿದೆ. ಬಳಿಕ ಹಲವರು ಸೇರಿ ವಿಎಯನ್ನು ಆತನ ನಿವಾಸದ ಹೊರಗೆ ಮಲಗಿಸಿ ಬಂದಿದ್ದಾರೆ. ವಿಎ ನಾಗಸುಂದರ ಈ ಹಿಂದೆಯೂ ಹಲಾವರು ಬಾರಿ ಕುಡಿದು ರಸ್ತೆಯಲ್ಲಿ ಬಿದ್ದು ಇದೇ ರೀತಿ ವರ್ತಿಸಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗಿದ್ದ. ಆದರೆ ಇತ್ತೀಚೆಗೆ ಇದು ಈತನ ನಿತ್ಯ ಕಾಯಕ ಎಂಬAತಾಗಿದ್ದು ಈತನ ಈ ಚಟದಿಂದ ಹಲವು ದಾಖಲೆ ಪತ್ರ ಕಳೆದು ಹಾಕಿದ್ದಾನೆ ಎಂಬ ಆರೋಪವೂ ಇದೆ. ಈತನ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಈ ವಿಎಯನ್ನು ವರ್ಗಾವಣೆ ಮಾಡಿ ಇಲ್ಲ ಮದ್ಯವರ್ಜನ ಶಿಬಿರದಲ್ಲಾದ್ರೂ ಬಿಡಿ ಅನ್ನೋದು ಸ್ಥಳಿಯರ ಮನವಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು