ದೆಹಲಿ: ದೆಹಲಿಯ ಬಳಿಕ ವಾಯುಮಾಲಿನ್ಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿ ಇರುವುದರಿಂದ ಈಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚೆತ್ತುಕೊಂಡಿದೆ.
ಹದಿನೈದು ವರ್ಷಕ್ಕಿಂತ ಹಳೆಯ ಪೆಟ್ರೋಲ್ ಡೀಸೆಲ್ ವಾಹನಗಳ ಸಂಚಾರ ಬ್ಯಾನ್ ಮಾಡುವಂತೆ 2016 ರಲ್ಲೇ ಸರ್ಕಾರಕ್ಕೆ ನೋಟೀಸ್ ನೀಡಿತ್ತು. ಆದರೆ ಈ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಸರಕಾರ ಹಿಂದೇಟು ಹಾಕಿತ್ತು.
ಆದ್ರೆ ಈಗ ಸರ್ಕಾರದ ಕೆಲ ಮಸೂದೆಯಲ್ಲೇ ತಿದ್ದುಪಡಿ ತಂದು, ಎಷ್ಟು ಹಳೆಯ ವಾಹನಗಳನ್ನು ಬ್ಯಾನ್ ಮಾಡಬೇಕು, ಯಾವ ರೀತಿಯ ವಾಹನಗಳನ್ನು ಬ್ಯಾನ್ ಮಾಡಬೇಕು ಎಂಬ ವರದಿಯನ್ನು ಸಿದ್ದಪಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ದೆಹಲಿ ತಿಳಿಸಿದೆ.