ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಿಂದ ದನ ಕಳ್ಳತನ ಬಗ್ಗೆ ತನಿಖೆ ನಡೆಸಿ,ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಮನವಿ-ಕಹಳೆ ನ್ಯೂಸ್
ಪುತ್ತೂರು ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರ ದೇವಮಾರು ಗದ್ದೆ ಹಾಗೂ ವಠಾರದಲ್ಲಿ ಈ ಹಿಂದಿನ ಒಂದು ವಾರದಿಂದ ಗೋ ಕಳ್ಳತನದ ಮಾಹಿತಿ ನಮ್ಮ ಸಂಘಟನೆಗೆ ಬಂದಿದ್ದು ದೇವಳದ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ಇದ್ದರೂ ಯಾವುದೇ ದೂರು ದಾಖಲಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ಗೋಕಳ್ಳತನ ನಡೆಯುವ ಸಾಧ್ಯತೆ ಇದ್ದು,ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಇಲಾಖಾ ತನಿಖೆ ನಡೆಸಿ ಇಂತಹ ಕುಕೃತ್ಯಗಳನ್ನು ತಡೆಯುವಂತೆ ಹಾಗೂ ತಮ್ಮ ಭದ್ರತಾ ಸಿಬ್ಬಂದಿಗಳಿಗೆ ಸರಿಯಾದ ಎಚ್ಚರಿಕೆಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಬೇಕಾಗಿ ಆಗ್ರಹಿಸುವಂತೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ ಕಾರ್ಯದರ್ಶಿ ಜಿತೇಶ್ ಬಲ್ನಾಡ್,ಬಜರಂಗದಳ ಪುತ್ತೂರು ನಗರ ಪ್ರಖಂಡ ಸಂಯೋಜಕರಾದ ಜಯಂತ್ ಕುಂಜೂರುಪಂಜ, ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಸಂಯೋಜಕರಾದ ವಿಶಾಕ್ ಸಸಿಹಿತ್ಲು ಹಾಗೂ ಹಿಂದೂ ಮುಖಂಡ ದಿನೇಶ್ ಕುಮಾರ್ ಜೈನ್ ಯಕ್ಷಿತ್ ಪೂರ್ಣ, ಲಿಖಿತ್ ಸಾಜ ಕಾರ್ಯಕರ್ತರು ಉಪಸ್ಥಿತರಿದ್ದರು.