Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಸುಲ್ತಾನ್ ಜ್ಯುವೆಲ್ಲರಿ ಶುಭಾರಂಭದ ವೇಳೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್..!! ವೃದ್ಧರು, ರೋಗಿಗಳ ಪರದಾಟ ; ನಟಿ ಪ್ರೀಯಾಮಣಿ ಆಗಮನದ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ನಲ್ಲಿ‌ ಸಿಲುಕಿದ ಅಂಬ್ಯುಲೆನ್ಸ್..!! : ಪುತ್ತೂರಿನ ಜನತೆ ವ್ಯಾಪಕ ಆಕ್ರೋಶ..!! – ಕಹಳೆ ನ್ಯೂಸ್

ಪುತ್ತೂರು : ಕೇರಳ ಮೂಲದ ಸುಲ್ತಾನ್ ಜ್ಯುವೆಲ್ಲರಿ ಇಂದು ಅದ್ದೂರಿಯಾಗಿ ಶುಭಾರಂಭಗೊಂಡಿದ್ದು, ಈ ವೇಳೆ ಪುತ್ತೂರು ಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ರೋಗಿಯನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಸಂಕಷ್ಟಕ್ಕೆ ಸಿಲುಕಿದ ಘಟನೆ ಪುತ್ತೂರು ಮುಖ್ಯರಸ್ತೆಯ ಏಳ್ಮುಡಿಯಲ್ಲಿ ನಡೆದಿದೆ.

ಜ್ಯುವೆಲ್ಲರಿ ಮಳಿಗೆ ಉದ್ಘಾಟನೆಗೆ ನಟಿಯೊಬ್ಬಳು ಆಗಮಿಸುವ ಕಾರಣಕ್ಕಾಗಿ, ಪೊಲೀಸರು ಭದ್ರತೆ ನಿಯೋಜಿಸಿದ್ದರು. ಭದ್ರತೆಗೆ 6 ಪೊಲೀಸರು, ಹಾಗೂ ಒಂದು ಪೊಲೀಸ್ ವಾಹನವನ್ನು ನಿಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ದರ್ಬೆ ಹಾಗೂ ಬಸ್ ನಿಲ್ದಾಣದ ಬಳಿಯಿಂದ ಬರುವ ವಾಹನಗಳು ಏಳ್ಮುಡಿಯ ಬಳಿ, ವಾಹನದಟ್ಟನೆ ಉಂಟಾಗಿ, ಟ್ರಾಫಿಕ್ ಜಾಮ್ ಆಗಿದೆ. ಇದೇ ವೇಳೆ ರೋಗಿಯೊಬ್ಬರನ್ನು ಕರೆದುಕೊಂಡು ಹೋಗುವ ಅಂಬ್ಯುಲೆನ್ಸ್ ಒಂದು ಈ ಟ್ರಾಫಿಕ್ ಜಾಮ್ ನಲ್ಲಿ ಸಂಚರಿಸಲು ಕಷ್ಟಪಟ್ಟ ಘಟನೆ ನಡೆದಿದ್ದು, ಪೊಲೀಸರು ಟ್ರಾಫಿಕ್ ಕ್ಲಿಯರೆನ್ಸ್ ಗೆ ಹರಸಾಹಸ ಪಟ್ಟಿದ್ದಾರೆ. ವಾಣಿಜ್ಯೋದ್ಯಮಕ್ಕೆ ಸರ್ಕಾರದ ವತಿಯಿಂದ ಭದ್ರತೆ ಒದಗಿಸಿದ್ದಕ್ಕೆ ಪುತ್ತೂರಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು