Sunday, January 19, 2025
ಉಡುಪಿಸುದ್ದಿ

ಸುರತ್ಕಲ್ : ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಹೃದಯಾಘಾತ ; ಯುವಕ ಸಾವು – ಕಹಳೆ ನ್ಯೂಸ್

ಸುರತ್ಕಲ್ : ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಸುರತ್ಕಲ್ ಬೀಚ್‌ನಲ್ಲಿ ಫೆ. 21 ರಂದು ವರದಿಯಾಗಿದೆ.


ಮೃತಪಟ್ಟವರನ್ನು ಕುಳಾಯಿ ನಿವಾಸಿ ಸದ್ಯ ಚೊಕ್ಕಬೆಟ್ಟು 8ನೇ ಬ್ಲಾಕ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಚಾಯಬ್ಬ ಎಂಬವರ ಮಗ ಅಸ್ಗರ್ (32) ಎಂದು ತಿಳಿದು ಬಂದಿದೆ.
ಚಾಲಕ ವೃತ್ತಿ ಮಾಡುತ್ತಿದ್ದ ಅಸ್ಗರ್ ಬುಧವಾರ ಮಧ್ಯಾಹ್ನ ಇಡ್ಯಾ ಮಸೀದಿ ಸಮೀಪದ ಬೀಚ್‌ನಲ್ಲಿ ಸ್ನಾನಕೆಂದು ಬಂದಿದ್ದರು ಎನ್ನಲಾಗಿದೆ. ಇವರು ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸುರತ್ಕಲ್‌ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು