Sunday, January 19, 2025
ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ಪುತ್ತೂರು : ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ, ಚಿಂತನಾ ದಿನಾಚರಣೆ -ಕಹಳೆ ನ್ಯೂಸ್

ಪುತ್ತೂರು: ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಪುತ್ತೂರು ಇಲ್ಲಿ ಸ್ಕೌಟ್, ಗೈಡ್ ಚಳವಳಿಯ ಸಂಸ್ಥಾಪಕರಾದ ಲಾರ್ಡ್ ಬ್ಯಾಡನ್ ಪೊವೆಲ್ ರವರ ಜನ್ಮ ದಿನಾಚರಣೆ ” ಚಿಂತನಾ ದಿನವನ್ನು “ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.ಬೆಳಗ್ಗೆ ಧ್ವಜ ವಂದನೆಯೊಂದಿಗೆ ಆರಂಭಗೊಂಡು , ಶಾಲಾ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾರ್ಡ್ ಬ್ಯಾಡನ್ ಪೊವೆಲ್ ರವರ ಭಾವ ಚಿತ್ರಕ್ಕೆ ಪುಷ್ಪನಮನದ ಬಳಿಕ ಸ್ಕೌಟ್ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಲಾರ್ಡ್ ಬ್ಯಾಡನ್ ಪೊವೆಲ್ ರವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸ್ಕೌಟ್, ಗೈಡ್, ಕಬ್, ಮತ್ತು ಬುಲ್ ಬುಲ್ ಶಿಕ್ಷಕಿಯರಾದ ಶ್ರೇಮತಿ ವಿಲ್ಮಾ ಫೆರ್ನಾಂಡಿಸ್, ಶ್ರೀಮತಿ ಭವ್ಯ, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಸುಶ್ಮಿತಾ, ಶ್ರೀಮತಿ ದಿವ್ಯ, ಶ್ರೀಮತಿ ಜೋಸ್ಲಿನ್, ಶ್ರೀಮತಿ ಮಮತಾ ಹಾಗೂ ಕು. ದೀಕ್ಷಾ ಉಪಸ್ಥಿತರಿದ್ದರು. ಕಬ್ ಶಿಕ್ಷಕಿ ಶ್ರೀಮತಿ ಸುಶ್ಮಿತಾ ಸ್ವಾಗತಿಸಿದರು. ಕಬ್ ಶಿಕ್ಷಕಿ ಶ್ರೀಮತಿ ದಿವ್ಯ ವಂದಿಸಿದರು.ಬುಲ್ ಬುಲ್ ಶಿಕ್ಷಕಿ ಜೋಸ್ಲಿನ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು