Sunday, November 24, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ರಾಮಾಯಣ ಹಾಗೂ ಮಹಾಭಾರತ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿಯೊಂದಿಗೆ ಚಿನ್ನದಪದಕ- ಕಹಳೆ ನ್ಯೂಸ್

ಪುತ್ತೂರು : ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇವರು 8ನೇ ಮತ್ತು 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಗಳನ್ನಾಧರಿಸಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ಶೈಕ್ಷಣಿಕ 2023 -24 ರಲ್ಲಿ ಸಂಘಟಿಸಲಾದ ಪರೀಕ್ಷೆಗಳಲ್ಲಿ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 450 ವಿದ್ಯಾರ್ಥಿಗಳು ಭಾಗವಹಿಸಿದ್ದು, ತೇರ್ಗಡೆ ಹೊಂದಿರುತ್ತಾರೆ. 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯೊಂದಿಗೆ ಬಂಗಾರದ ಪದಕಗಳಿಗೆ ಭಾಜನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮಾಯಣ ವಿಬಾಗದಲ್ಲಿ ಎಂಟನೆಯ ತರಗತಿಯ ಅಪೇಕ್ಷಾ ಎನ್(ಶ್ರೀ ವೆಂಕಟರಮಣ ಕಾರಂತ್ ಮತ್ತು ಶ್ರೀಮತಿ ಸಂಧ್ಯಾ.ಎನ್ ದಂಪತಿ ಪುತ್ರಿ) , ಸಾನ್ವಿ ಎಸ್ ಪ್ರಭು(ಶ್ರೀ ಸಂತೋಷ್ ಕುಮರ್.ಎ ಮತ್ತು ಶ್ರೀಮತಿ ಸವಿತಾ.ಕೆ ದಂಪತಿ ಪುತ್ರಿ) , ಅವನಿ ಘಾಟೆ(ಶ್ರೀ ರಘುನಂದ ಘಾಟೆ.ಡಿ ಮತ್ತು ಶ್ರೀಮತಿ ಮಮತಾ.ಆರ್.ಘಾಟೆ ದಂಪತಿ ಪುತ್ರಿ) ಮತ್ತು ಸಾನ್ವಿಕಾ ಎಸ್(ಶ್ರೀ ವಸಂತ ಗೌಡ ಮತ್ತು ಶ್ರೀಮತಿ ಶೋಭ ದಂಪತಿ ಪುತ್ರಿ) ಹಾಗೂ ಮಹಾಭಾರತ ವಿಭಾಗದಲ್ಲಿ ಒಂಭತ್ತನೆಯ ತರಗತಿಯ ಸಾನ್ವಿಕಾ ಎಸ್ ರೈ(ಶ್ರೀ ಜಗನ್ನಾಥ ರೈ ಎಸ್ ಮತ್ತು ಶ್ರೀಮತಿ ಸುರೇಖಾ.ಜೆ.ರೈ ದಂಪತಿ ಪುತ್ರಿ), ಪ್ರಣವ ಕೃಷ್ಣ(ಶ್ರೀ ಕೃಷ್ಣ ಪ್ರಸನ್ನ ಮತ್ತು ಶ್ರೀಮತಿ ಪ್ರತಿಭಾ ಪ್ರಸನ್ನ ದಂಪತಿ ಪುತ್ರ) , ಆದೀಶ್ ಜೈನ್(ಶ್ರೀ ಯಶೋಧರ ಜೈನ್ ಮತ್ತು ಶ್ರೀಮತಿ ಮಮತಾ ದಂಪತಿ ಪುತ್ರ), ಮತ್ತು ತೇಜಸ್ ಕೆ ಆರ್(ಶ್ರೀ ರಾಮಕೃಷ್ಣ ಗೌಡ ಮತ್ತು ಸುಜಾತ ದಂಪತಿ ಪುತ್ರ). ಇವರು ಚಿನ್ನದ ಪದಕಕ್ಕೆ ಭಾಜನರಾದ ವಿದ್ಯಾರ್ಥಿಗಳು ಎಂಬುದಾಗಿ ಶಾಲಾ ಮುಖ್ಯ ಗುರುಗಳು      ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು