ಫೆ.24ರಂದು ಸಂಪ್ಯದ ಶ್ರೀ ವ್ಯಾಘ್ರ ಚಾಮುಂಡಿ ಮತ್ತು ರಾಜ ಗುಳಿಗ ದೈವಗಳ ಮರಕ್ಕ ನೇಮೋತ್ಸವ- ಕಹಳೆ ನ್ಯೂಸ್
ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಶ್ರೀ ವಾಸುಕೀ ನಾಗಬ್ರಹ್ಮ, ಶ್ರೀ ರಕ್ತೇಶ್ವರಿ, ರಾಜಗುಳಿಗ ಶ್ರೀ ವ್ಯಾಘ್ರಚಾಮುಂಡಿ ಸಾನಿಧ್ಯದಲ್ಲಿ ಫೆಬ್ರವರಿ 24 ರಂದು ಕುಕ್ಕಾಡಿ ತಂತ್ರಿ ಶ್ರೀ ಪ್ರೀತಮ್ ಪುತ್ತೂರಾಯ ಇವರ ನೇತೃತ್ವದಲ್ಲಿ ಬೆಳಗ್ಗೆ ಘಂಟೆ 9.00 ರಿಂದ ಆಶ್ಲೇಷ ಬಲಿ, ತಂಬಿಲ ಸೇವೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿರುವುದು.
ಸಂಜೆ ಘಂಟೆ 6.00 ರಿಂದ ಬೂಡಿಯಾರು ಹೊಸಮನೆ ಶ್ರೀ ಚಕ್ರರಾಜರಾಜೇಶ್ವರಿ ದೇವಿಯ ಭೇಟಿ, ದುರ್ಗ ಪೂಜೆಯ ಬಳಿಕ ಸೂಟೆಯ ಬೆಳಕಿನಲ್ಲಿ ಭಂಡಾರವನ್ನು ಪಲ್ಲಕ್ಕಿ ಮೆರವಣಿಗೆಯಲ್ಲಿ ಮರಕ್ಕಕ್ಕೆ ತಂದು ರಾತ್ರಿ ಘಂಟೆ 8.00 ರಿಂದ ಶ್ರೀ ವ್ಯಾಘ್ರ ಚಾಮುಂಡಿ ಮತ್ತು ರಾಜ ಗುಳಿಗ ದೈವಗಳ ಮರಕ್ಕ ನೇಮೋತ್ಸವವು ಬಹಳ ವಿಜೃಂಬನೆಯಿAದ ನಡೆಯಲಿರುವುದು. ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೇಮೋತ್ಸವವು ಸಂಪನ್ನಗೊಳ್ಳಲಿದೆ.