Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಗೃಹಪ್ರವೇಶದ ದಿನವೇ ಮನೆಮಾಲೀಕ ದಿಢೀರ್ ಸಾವು-ಕಹಳೆ ನ್ಯೂಸ್

ಮಂಗಳೂರು : ಬಜ್ಪೆ ಕರಂಬಾರಿನಲ್ಲಿ ನೂತನ ಗೃಹ ಪ್ರವೇಶದ ಸಮಯದಲ್ಲೇ ಮನೆ ಮಾಲೀಕ ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮಧುಕರ್ ಎಂಬುವವರೇ ಮೃತ ಹೊಂದಿದ ವ್ಯಕ್ತಿ. ಮಧುಕರ್ ಅವರು ಕಾವೂರಿನಲ್ಲಿ ಒಂದು ಅಂಗಡಿಯನ್ನು ಹೊಂದಿದ್ದು ಅವರು ಹಲವಾರು ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮನೆ ಕಟ್ಟಿ ಸಂಭ್ರಮಿಸುತ್ತಿರುವಾಗಲೇ ಬರಸಿಡಿಲಿನಂತೆ ಬಂದ ಹೃದಯಾಘಾತವು ಮನೆ ಮಾಲೀಕನ ಜೀವವನ್ನೇ ಕಿತ್ತುಕೊಂಡಿದೆ. ಸ್ನೇಹಿತರು ನೆಂಟರು ಊಟ ಮುಗಿಸಿದ್ದು, ಮದುಕರ್ ಅವರು ತನ್ನ ಹೊಸ ಮನೆಯ ಊಟ ಕೂಡಾ ಮಾಡಿರಲಿಲ್ಲ ಅವರು ಎಲ್ಲರ ಜೊತೆ ಸಂಭ್ರಮದಿAದಲೇ ಓಡಾಡುತ್ತಿದ್ದರು. ಇದೀಗ ಹೊಸ ಮನೆಯಲ್ಲಿ ಸೂತಕದ ಛಾಯೆ ಉಂಟಾಗಿದೆ.
ಕಾವೂರಿನಲ್ಲಿ ಚಿರಪರಿಚಿತ ವ್ಯಕ್ತಿಯಾಗಿರುವ ಮಧುಕರ್ ಅವರ ನಿಧನಕ್ಕೆ ಇಡೀ ಊರೇ ಮೌನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು