ಕಲ್ಲಡ್ಕ: ಮಾ.01ರಿಂದ ನಡೆಯುವ ಗೋಳ್ತಮಜಲು ಗ್ರಾಮ ದೈವಗಳ ವಾರ್ಷಿಕ ನೇಮೋತ್ಸವದ ಗೊನೆ ಮೂಹೂರ್ತ – ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ದೈವಗಳಾದ ಶ್ರಿ ಗಿಲ್ಕಿಂದಾಯ ಮತ್ತು ಈರ್ವರು ಉಳ್ಳಾಕುಲು ದೈವಗಳ ಕೆರೆನೇಮ ಮತ್ತು ವಲಸರಿ ಜಾತ್ರೆಯು ಮಾ.01ರಿಂದ ಮಾ.02ರವರೆಗೆ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಫೆ. 23ರಂದು ಊರ ಹಿರಿಯರ ಸಮ್ಮುಖದಲ್ಲಿ ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು.
ಬಳಿಕ ಜಾತ್ರೆಗೆ ಸಂಬಂಧಿಸಿದ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಶ್ರೀ ಕ್ಷೇತ್ರದಲ್ಲಿ ಮಾ. 01ರಂದು ಕೆರೆನೇಮ ಹಾಗೂ ಮಾ.02ರಂದು ವಲಸರಿ ನೇಮೋತ್ಸವವು ನಡೆಯಲಿದೆ .
ಕಾರ್ಯಕಮದಲ್ಲಿ ಕ್ಷೇತ್ರದ ತಂತ್ರಿಗಳಾದ ಶ್ರಿ ಶ್ಯಾಮ್‌ಭಟ್ ತೋಟ, ಶ್ರಿ ಮುರಳಿಕೃಷ್ಣ ಭಟ್ ತೋಟ, ಶ್ರಿ ಸುಂದರ ಆಳ್ವ, ಶ್ರಿ ಸುಂದರ ಶೆಟ್ಟಿ, ಶ್ರಿ ಮುತ್ತಪ್ಪ ಗೌಡ, ಶ್ರಿ ಚಂದ್ರಶೇಖರ ಟೈಲರ್, ಶ್ರಿ ಮಿಥುನ್ ಪೂಜಾರಿ, ಶ್ರಿ ಲೋಕೇಶ್ ಗೌಡ, ಶ್ರಿ ಐತಪ್ಪ ಪೂಜಾರಿ, ಶ್ರಿ ಹರೀಶ್ ಬಲ್ಕಟ್ಟ, ಶ್ರಿ ವಿಶ್ವನಾಥ ಎಚ್, ಶ್ರಿ ಗಿರಿಯಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.