Sunday, January 19, 2025
ಸುದ್ದಿ

ಟಾಟಾ ಪ್ರಾಜೆಕ್ಟ್ ಎಂಡಿ – ಸಿಇಒ ವಿನಾಯಕ್ ಪೈ ಅವರಿಗೆ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಷನ್ ವರ್ಷದ ವ್ಯಕ್ತಿ ಪುರಸ್ಕಾರ – ಕಹಳೆ ನ್ಯೂಸ್

ನವದೆಹಲಿಯಲ್ಲಿ ನೂತನ ಸಂಸತ್ ಭವನದ ಯಶಸ್ವಿ ಜವಾಬ್ದಾರಿ ನಿರ್ವಹಿಸಿದ ಬಳಿಕ ರಾಷ್ಟ್ರಮಟ್ಟದಲ್ಲಿ ಸಿಕ್ಕಿದ ಗೌರವಕ್ಕಿಂತ ಜನ್ಮತಾಳಿದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಗೌರವಿಸಿ ನೀಡಿರುವ ವರ್ಷದ ವ್ಯಕ್ತಿ ಪುರಸ್ಕಾರ, ಸನ್ಮಾನ ಖುಷಿ ನೀಡಿದೆ ಟಾಟಾ ಪ್ರಾಜೆಕ್ಟ್ ಎಂಡಿ – ಸಿಇಒ ವಿನಾಯಕ್ ಪೈ ಹೇಳಿದ್ದಾರೆ.


ಅವರು ಎಂಟನೇ ವರ್ಷದ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಷನ್ ಜಿಪಿಎಲ್ ಉತ್ಸವ್ 2024 ಇದರಲ್ಲಿ ವರ್ಷದ ವ್ಯಕ್ತಿ ಗೌರವ ಸ್ವೀಕರಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ, ಕೇಂದ್ರ ಸಚಿವರುಗಳ ಒಡನಾಟದಿಂದ ಪ್ರಭಾವಿತನಾಗಿದ್ದರೂ ಶಾಸಕ ವೇದವ್ಯಾಸ ಕಾಮತ್ ಅವರನ್ನು ಭೇಟಿ ಮಾಡಿದ ಬಳಿಕ ಇತ್ತೀಚಿನ ವರ್ಷಗಳಲ್ಲಿ ನಾನು ಭೇಟಿ ಮಾಡಿದ ಅತ್ಯುತ್ತಮ ಪ್ರಭಾವಿ ರಾಜಕಾರಣಿಗಳಲ್ಲಿ ಇವರು ಅಗ್ರಗಣ್ಯರಾಗಿದ್ದಾರೆ ಎಂದು ಪೈ ಶ್ಲಾಘಿಸಿದರು. ಜಿಪಿಎಲ್ ಉತ್ಸವ ಯುವ ಪ್ರತಿಭೆಗಳಲ್ಲಿ ಹೊಸ ಉತ್ಸಾಹ ಮೂಡಿಸಿ ಅವರನ್ನು ಸಮಾಜದ ಏಳಿಗೆಯಲ್ಲಿ ತಮ್ಮದೇ ರೀತಿಯ ಮಾದರಿ ಕೊಡುಗೆ ನೀಡುವಂತೆ ಮಾಡುವಲ್ಲಿ ಶ್ರಮಿಸುತ್ತಿರುವುದು ಶ್ರೇಷ್ಠ ಕಾರ್ಯ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

( ಬಾಕ್ಸಿನಲ್ಲಿ.. 26 ತಿಂಗಳಲ್ಲಿ ಭಾರತೀಯ ವಸ್ತುಗಳನ್ನೇ ಬಳಸಿ ನಿರ್ಮಿಸಿದ ಸಂಸತ್ತಿನ ನೂತನ ಕಟ್ಟಡದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಅಗಾಧ ಪ್ರೀತಿ ಮತ್ತು ದೂರದೃಷ್ಟಿ ಇದೆ. ತಮ್ಮದೇ ಮನೆಯ ನಿರ್ಮಾಣದಂತೆ ಅವರು ಮುತುವರ್ಜಿಯೊಂದಿಗೆ ಅದರಲ್ಲಿ ತೊಡಗಿಸಿಕೊಂಡಿದ್ದರು. ಟಾಟಾ ಪ್ರಾಜೆಕ್ಟ್ 5 ವರ್ಷ ಸಂಸತ್ತಿನ ನೂತನ ಕಟ್ಟಡದ ನಿರ್ವಹಣೆ ಮಾಡಲಿದೆ. ಈಗಲೂ ಮೋದಿಯವರು ಸಂಸತ್ ಭವನದ ವಿಷಯದಲ್ಲಿ ನಮ್ಮೊಂದಿಗೆ ಸಂವಹನ ನಡೆಸುತ್ತಾ ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ ಎಂದು ವಿನಾಯಕ್ ಪೈ ಹೇಳಿದ್ದಾರೆ.)

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಂಗಳೂರಿನ ಹೃದಯಭಾಗದಲ್ಲಿ 75 ಸೆಂಟ್ಸ್ ಜಾಗದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಕಟ್ಟಡ ನಿರ್ಮಾಣ ಹಾಗೂ ಮೂಲ್ಕಿ ಸಮೀಪ ನದಿತಟದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಷನ್ ಗುರಿಯಾಗಿದ್ದು, ಅದಕ್ಕೆ ದಾನಿಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯೋಜಕರಿಗೆ, ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಪ್ರಾಯೋಜಕರಾದ ಡಾ. ದೀಪಕ್ ಭಾಸ್ಕರ್ ಶೆಣೈ, ಮಾಜಿ ಕ್ರಿಕೆಟ್ ಆಟಗಾರ ದಿನೇಶ್, ಉದ್ಯಮಿಗಳಾದ ಪ್ರದೀಪ್ ಜಿ ಪೈ, ಸುಬ್ರಾಯ್ ಪೈ, ನಿತ್ಯಾನಂದ ಪೈ, ಜಯಂತ್ ಪೈ, ಗಣೇಶ್ ಕಾಮತ್, ಅನಂತ್ ಕಾಮತ್, ಅತುಲ್ ಕುಡ್ವಾ, ರಾಜೇಶ್ ಪೈ, ವರದರಾಜ್ ಪೈ, ನರೇಂದ್ರನಾಥ್ ನಾಯಕ್, ದಿನೇಶ್ ಪೈ, ಸುಮಿತ್ ಭಟ್, ರಾಹುಲ್ ಕುಡ್ವಾ, ನಾಗೇಂದ್ರ ಪೈ, ದೀಪಾ ಪೈ, ಸಿಎ ಎಸ್ ಎಸ್ ನಾಯಕ್, ಸಿಎ ಗೌತಮ್ ಪೈ ವಿಶಾಲ್, ಜನಾರ್ಧನ್,‌ ಕೌಶಲ್ಯಾಧಿಕಾರಿ ಬಾಳೇರಿ, ಪ್ರಮುಖರಾದ ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿದರು.