Recent Posts

Sunday, January 19, 2025
ಸುದ್ದಿ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಐದು ಮಂದಿ ಆರೋಪಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಐದು ಮಂದಿ ಆರೋಪಿಗಳನ್ನ ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಾರಾಯಣ ಗುರು ಸರ್ಕಲ್‌ನಲ್ಲಿ ನಡೆದಿದೆ.

ಮೂಡಬಿದ್ರೆ ನಿವಾಸಿಗಳಾದ ಜಿತೇಶ್, ವಿಕೇಶ, ಆಸ್ಟಿನ್, ಆರ್ವಿನ್ ಹಾಗೂ ಆಲ್ಡ್ರಿನ್ ಬಂಧಿತ ಆರೋಪಿಗಳು. ನಿನ್ನೆ ಸಂಜೆ ಬಿ.ಸಿ.ರೋಡಿನ ನಾರಾಯಣಗುರು ಸರ್ಕಲ್‌ನಲ್ಲಿ ಬಂಟ್ವಾಳ ಟ್ರಾಫಿಕ್ ಠಾಣೆಯ ಉಪನಿರೀಕ್ಷಕಿ, ಪೊಲೀಸ್ ಸಿಬ್ಬಂದಿ ಜೊತೆಗೆ ವಾಹನ ತಪಾಸಣಾ ಮಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಪುತ್ತೂರು ಕಡೆಯಿಂದ ಕಾರೊಂದು ಬಂದಿದ್ದು, ಟಿಂಟೆಡ್ ಗ್ಲಾಸ್ ಇರುವುದನ್ನು ಹಾಗೂ ಸೀಟ್ ಬೆಲ್ಟ್ ಹಾಕದಿರುವುದನ್ನು ಕಂಡು ಕಾರನ್ನು ಎಸ್ಸೈ ಹಾಗೂ ಸಿಬ್ಬಂದಿ ತಡೆದು ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಕಾರಿನಲ್ಲಿದ್ದ ತಂಡ, ಎಸ್ಸೈ ಹಾಗೂ ಸಿಬ್ಬಂದಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇರೆ ವಾಹನಗಳ ತಪಾಸಣೆಗೂ ಅಡ್ಡಿ ಮಾಡಿದ್ದಾರೆ ಎಂದು ಟ್ರಾಫಿಕ್ ಎಸ್ಸೈ ಅವರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನ ತಪಾಸಣೆಯ ವೇಳೆ ಕಾರಿನಲ್ಲಿ ಬಂದ ತಂಡವೊಂದು ಎಸ್ಸೈ ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.