ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ| ಗಣೇಶ್ ಭಟ್‌ರವರಿಗೆ ಬೀಳ್ಕೊಡುಗೆ ಸಮಾರಂಭ -ಕಹಳೆ ನ್ಯೂಸ್
ಪುತ್ತೂರು : ಕಾಲೇಜಿನಲ್ಲಿ ಉಪನ್ಯಾಸಕರಾಗಿ 36 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಉಪಪ್ರಾಂಶುಪಾಲರಾದ
ಪ್ರೊ| ಗಣೇಶ್ ಭಟ್‌ರವರಿಗೆ ಕಾಲೇಜಿನ ಸ್ಟಾಫ್ ಅಸೋಸಿಯೇಶನ್ ವತಿಯಿಂದ ಇಂದು ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತಿ ವಂ| ಲಾರೆನ್ಸ್ ಮಸ್ಕರೇನಸ್‌ರವರು “ ನಿವೃತ್ತಿಯು ಹೊಸ
ಜೀವನದ ಬಾಗಿಲನ್ನು ತೆರೆದಿಡುತ್ತದೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂತೃಪ್ತ ಜೀವನ ನಡೆಸಲು ಸೇವಾ
ನಿವೃತ್ತಿಯು ಅನುವುಮಾಡಿಕೊಡುತ್ತದೆ “ ಎಂದು ಹೇಳಿ ಪ್ರೊ| ಗಣೇಶ್ ಭಟ್‌ರವರ ಮುಂದಿನ ಜೀವನವು ಸುಖಮಯವಾಗಲಿ ಎಂದು ಶುಭ
ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋರವರು “ಗಣಿತವನ್ನು ವಿದ್ಯಾರ್ಥಿಗಳಿಗೆ
ಮನದಟ್ಟಾಗುವಂತೆ ಬೋಧಿಸುವುದು ಸವಾಲಿನ ಕಾರ್ಯ. ಈ ಕೆಲಸವನ್ನು ಪ್ರೊ| ಗಣೇಶ್ ಭಟ್‌ರವರು ಅತ್ಯಂತ ಪರಿಣಾಮಕಾರಿಯಾಗಿ
ನಿರ್ವಹಿಸಿರುತ್ತಾರೆ. ಮಾತ್ರವಲ್ಲದೆ ತಮ್ಮ ಸೇವಾಸಂದರ್ಭದಲ್ಲಿ ಕಾಲೇಜು ನೀಡಿದ ಇತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿರುತ್ತಾರೆ.
ಉಪಪ್ರಾಂಶುಪಾಲರಾಗಿ ಕಾಲೇಜಿನ ಆಡಳಿತಾತ್ಮಮಕ ವಿಷಯಗಳಲ್ಲಿ ನೆರವಾಗಿದ್ದಾರೆ.” ಎಂದು ಹೇಳಿ ಪ್ರೊ| ಗಣೇಶ್ ಭಟ್‌ರವರ ಮುಂದಿನ ಜೀವನಕ್ಕೆ
ಶುಭ ಹಾರೈಸಿದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋರವರು ಪ್ರೊ| ಗಣೇಶ್ ಭಟ್ ರವರ ಸರಳತೆ ಬದ್ಧತೆಯ ಬಗ್ಗೆ ಪ್ರಶಂಸೆಯ
ನುಡಿಗಳನ್ನಾಡಿ ನಿವೃತ್ತ ಜೀವನವು ಆರೋಗ್ಯ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ| ಗಣೇಶ್ ಭಟ್‌ರವರು, ತಾವು ಕಲಿತ ವಿದ್ಯಾಸಂಸ್ಥೆಗಳಲ್ಲಿ ದೊರಕಿದ ಗುಣಮಟ್ಟದ ಶಿಕ್ಷಣವನ್ನು ಹಾಗೂ
ತಮ್ಮ ವೃತ್ತಿಜೀವನದ ಅವಿಸ್ಮರಣೀಯ ಘಟನೆಗಳನ್ನು ವಿವರಿಸಿ ತಮ್ಮ ವೃತ್ತಿ ಜೀವನವು ಸುಗಮವಾಗಿ ಸಾಗುವಲ್ಲಿ ನೆರವಾದ ಪ್ರತಿಯೋರ್ವರಿಗೂ
ವಂದನೆ ಸಲ್ಲಿಸಿ ಕಾಲೇಜಿನ ಅಭಿವೃದ್ಧಿಗಾಗಿ ಶುಭ ಹಾರೈಸಿದರು.
ಪ್ರೊ| ಗಣೇಶ್ ಭಟ್‌ರವರಿಗೆ ಕಾಲೇಜಿನ ಸ್ಟಾಫ್ ಅಸೋಸಿಯೇಶನ್‌ನ ವತಿಯಿಂದ ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಫಲಕ ಹಾಗೂ ಸ್ಮರಣಿಕೆ
ನೀಡಿ ಸನ್ಮಾನಿಲಸಲಾಯಿತು.
ಗೀತಾ ಪೂರ್ಣಿಮಾ ಮತ್ತು ಬಳಗ ಪ್ರಾರ್ಥಿಸಿದರು. ಸ್ಟಾಫ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಡಾ| ಡಿಂಪಲ್ ಜೆನಿಫರ್ ಫೆರ್ನಾಂಡಿಸ್
ಸ್ವಾಗತಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಪಿ ಎಸ್ ಕೃಷ್ಣ ಕುಮಾರ್ ಪಿ ಎಸ್ ಸನ್ಮಾನ ಭಾಷಣ ಮಾಡಿದರು.
ರಸಾಯನಶಾಸ್ತ್ರವಿಭಾಗದ ಪ್ರಾಧ್ಯಾಪಕರಾದ ಡಾ| ಎಡ್ವಿನ್ ಡಿಸೋಜ ಸನ್ಮಾನ ಪತ್ರವನ್ನು ವಾಚಿಸಿದರು. ಸ್ಟಾಫ್ ಅಸೋಸಿಯೇಶನ್‌ನ
ಕಾರ್ಯದರ್ಶಿಯಾದ ಡಾ| ಬಸ್ತ್ಯಂ ಪಯಾಸ್ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಜಸ್ಲಿನ್ ಡಿ ಕುನ್ಹ ಡಿಸೋಜ
ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯ ಕುಮಾರ್ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.