Saturday, November 23, 2024
ಬೆಳ್ತಂಗಡಿಸುದ್ದಿ

ವೇಣೂರು ಮಹಾಮಜ್ಜನದ ಸಂಭ್ರಮ: ಧಾರ್ಮಿಕ ಸಭೆ

ಉಜಿರೆ : ಜೈನಧರ್ಮವನ್ನು ಉಳಿಸುವುದಕ್ಕಿಂತ ಅದರ ತತ್ವ –ಸಿದ್ಧಾಂತಗಳನ್ನು ನಿತ್ಯವೂ ಮನ, ವಚನ ಮತ್ತು ಕಾಯದಿಂದ ತ್ರಿಕರಣಪೂರ್ವಕವಾಗಿ ಪಾಲಿಸುವ ಪ್ರಯತ್ನ ಮಾಡಬೇಕು ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಶನಿವಾರ ವೇಣೂರಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅಯೋಜಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮತಾನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಬೆಂಗಳೂರಿನ ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ಮುಖ್ಯ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ ಯಾರು ತಮ್ಮ ಅಂತರoಗದ ವೈರಿಗಳನ್ನು ಗೆಲ್ಲುತ್ತಾರೋ ಅವರೇ ಜೈನರು. ಬದುಕು ಮತ್ತು ಬದಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಟ ತತ್ವವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಬೆಳಗಾವಿಯ ಪೋಲೀಸ್ ವರಿಷ್ಟಾಧಿಕಾರಿ ಜಿನೇಂದ್ರ ಕಣಗಾವಿ, ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಎಚ್ ಪಿ ಸಿ ಎಲ್ ನ ನವೀನ್ ಕುಮಾರ್, ಹೃದ್ರೋಗತಜ್ಞ ಡಾ| ಪದ್ಮನಾಭ ಕಾಮತ್, ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮತ್ತು ಶಾಸಕ ಹರೀಶ ಪೂಂಜ ಸೇರಿದಂತೆ ಯುಗಳ ಮುನಿಗಳ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿತ್ತು ಮತ್ತು ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ಮತ್ತು ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣಕುಮಾರ್ ಉಪಸ್ಥಿಯಲ್ಲಿದ್ದರು. ಈ ಸಂದರ್ಭದಲ್ಲಿ ಏರ್ ಇಂಡಿಯಾದಲ್ಲಿ ಪೈಲೆಟ್ ಆಗಿ ನೇಮಕಗೊಂಡ ವೇಣೂರಿನ ದಿವಂಗತ ಬಿ.ಪಿ.ಇಂದ್ರರ ಮೊಮ್ಮಗಳು ಕುಮಾರಿ ಅನನ್ಯಾ ಜೈನ್ ಅವರನ್ನು ಗೌರವಿಸಲಾಯಿತು.