Recent Posts

Monday, January 20, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಮಸಾಜ್​ ಪಾರ್ಲರ್​ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ; 7 ಯುವತಿಯರ ರಕ್ಷಣೆ – ಕಹಳೆ ನ್ಯೂಸ್

ಬೆಂಗಳೂರು: ಮಸಾಜ್​ ಪಾರ್ಲರ್​ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಥಾಯ್​ ಸ್ಪಾ ಮೇಲೆ ಯಲಹಂಕ ಪೊಲೀಸರು ದಾಳಿ ಮಾಡಿ 7 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತರನ್ನು ಆಂಜನೇಯ ಗೌಡ, ಹರೀಶ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿಗಳು ಯಲಹಂಕ ನ್ಯೂ ಟೌನ್​ನಲ್ಲಿ ರೋರಾ ಲಕ್ಸುರಿ ಥಾಯ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ದೇಶದಿಂದ ಯುವತಿಯರನ್ನು ಕರೆ ತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಈಶಾನ್ಯ ವಿಭಾಗದ ಡಿಸಿಪಿ ಯಲಹಂಕ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಯಲಹಂಕ ನ್ಯೂ ಟೌನ್​ ಪೊಲೀಸರು ದಾಳಿ ಮಾಡಿದ್ದಾರೆ.

ದಾಳಿ ವೇಳೆ ಆರೋಪಿಗಳು ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.