Saturday, November 23, 2024
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು ಜಿಲ್ಲೆಯ ಕಜಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕದ ಉದ್ಘಾಟನೆ – ಕಹಳೆ ನ್ಯೂಸ್

ಕಾಸರಗೋಡು : ಜಿಲ್ಲೆಯ ಕಜಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ 5ನೇ ಶುಭದಿನದಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜೈ ತುಲುನಾಡ್ (ರಿ.) ಸಂಘಟನೆಯ ಸಾರಥ್ಯದಲ್ಲಿ ಕಜಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ತುಲು ಲಿಪಿ ನಾಮಫಲಕವನ್ನು ಕುಂಟಾರು ಶ್ರೀ ರವೀಶ್ ತಂತ್ರಿರವರ ಶುಭ ಹಸ್ತದಲ್ಲಿ ಉದ್ಘಾಟನೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಉದ್ಘಾಟನೆಯ ಬಳಿಕ ತುಲು ಭಾಷೆ, ಲಿಪಿ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಜೈ ತುಲುನಾಡ್ (ರಿ.) ಸಂಘಟನೆಯನ್ನು ಶ್ಲಾಘಿಸಿ, ಇದೇ ರೀತಿ ಎಲ್ಲರೂ ನಿರಂತರವಾಗಿ ಶ್ರಮಿಸಬೇಕೆಂದರು. ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ| ವೇಣುಗೋಪಾಲ ಕಳೆಯತ್ತೋಡಿ ವಹಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಹರಿನಾರಾಯಣ ಶಿರಂತಡ್ಕ,ವಿಶ್ವ ಹಿಂದೂ ಪರಿಷತ್ ಬದಿಯಡ್ಕದ ಪ್ರಖಂಡ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ರೈ, ಶ್ರೀ ಗೋಸಾಡ ಕ್ಷೇತ್ರದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರವೀಂದ್ರ ರೈ ಗೋಸಾಡ, ಶ್ರೀ ಮಧುಸೂದನ್ ಐಯ್ಯರ್ ಮಂಗಳೂರು, ಪತ್ರಕರ್ತರಾದ ಅಖಿಲೇಶ್ ನಗುಮುಗಂ, ಜೈ ತುಲುನಾಡ್ (ರಿ.) ಕಾಸರಗೋಡು ಘಟಕದ ಕಾರ್ಯದರ್ಶಿಯಾದ ಶ್ರೀ ಜಗನ್ನಾಥ ಕಂಡತ್ತೋಡಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತಿಯಲ್ಲಿದ್ದರು. ಶ್ರೀ ಮಂಜುನಾಥ್ ಉಡುಪ ಕಾರ್ಯಕ್ರಮಕ್ಕೆ ಶುಭ ನುಡಿ ಗೈದರು. ಕಾರ್ಯಕ್ರಮಕ್ಕೆ ಪ್ರಚಾರ ಸಮಿತಿಯ ಮುಖ್ಯಸ್ಥ ಶ್ರೀ ರಾಜೇಶ್ ಮಾಸ್ಟರ್ ಆಗಲ್ಪಾಡಿ ಸ್ವಾಗತವನ್ನಿತ್ತರು. ಕವಿ, ತುಲು ಸಾಹಿತಿ ಶ್ರೀ ವಿಜಯರಾಜ್ ಪುಣಿಂಚಿತ್ತಾಯ ಧನ್ಯವಾದ ಗೈದರು. ಶ್ರೀ ಅಮೃತ್ ರಾಜ್ ರೈ ಮುಕ್ಕೂರು ಕಾರ್ಯಕ್ರಮವನ್ನು ನಿರೂಪಿಸಿದರು.