Sunday, March 30, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ : ರಿಕ್ಷಾಗಳ ಮಧ್ಯೆ ಮುಖಾಮುಖಿ ಢಿಕ್ಕಿ : ಒರ್ವ ಮೃತ್ಯು, ಹಲವರಿಗೆ ಗಾಯ : ಪ್ರಕರಣ ದಾಖಲು- ಕಹಳೆ ನ್ಯೂಸ್

ಬಂಟ್ವಾಳ : ಎರಡು ರಿಕ್ಷಾಗಳ ಮಧ್ಯೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಹಲವರು ಗಾಯಗೊಂಡ ಘಟನೆ ವಿಟ್ಲ ಸಮೀಪದ ಪಡಿ ಬಾಗಿಲು ಎಂಬಲ್ಲಿ ನಡೆದಿದೆ.
ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಿಕ್ಷಾ ಚಾಲಕ ರವಿ ಕುಮಾರ್ ಎಂಬವರ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಮತ್ತೊಂದು ಆಟೋ ರಿಕ್ಷಾದಲ್ಲಿದ್ದ ಪ್ರಯಾಣಿಕರೊಬ್ಬರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಅಳಿಕೆ ಗ್ರಾಮ ಮತ್ತು ಅಂಚೆ ನಿವಾಸಿ ಶ್ರೀಮತಿ ಶರ್ಮಿಳ (39) ಎಂಬವರು ದೂರುದಾರರು. ಅವರು ತನ್ನ ಮಗಳೊಂದಿಗೆ, ಹಮೀದ್ ಎಂಬವರ ಆಟೋ ರಿಕ್ಷಾದಲ್ಲಿ ಇತರ ಪ್ರಯಾಣಿಕರೊಂದಿಗೆ ವಿಟ್ಲ ಕಡೆಗೆ ಬರುತ್ತಿದ್ದಾಗ, ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಪಡಿಬಾಗಿಲು ಎಂಬಲ್ಲಿ, ಎದುರುನಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು, ಅದರ ಚಾಲಕ ರವಿಕುಮಾರವರು ಅಜಾಗರೂಕತೆ ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಬಂದು ತಾವು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಮುಖಾ-ಮುಖಿ ಡಿಕ್ಕಿ ಹೊಡೆದಿದ್ದಾರೆ ಎಂದು ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಿಕ್ಷಾ ಮಗುಚಿ ಬಿದ್ದಿದ್ದು, ಕೂಡಲೇ ಅಲ್ಲಿ ಸೇರಿದವರು ರಿಕ್ಷಾವನ್ನು ಎತ್ತಿ ಅದರೊಳಗಿದ್ದ ಚಾಲಕ ಹಮೀದರವರನ್ನು ಸೇರಿ ಇತರೆ ಪ್ರಯಾಣಿಕರನ್ನು ಹೊರ ತೆಗೆದು ಉಪಚರಿಸಿ, ಗಾಯಗೊಂಡವರನ್ನು ಸ್ಥಳಕ್ಕೆ ಬಂದ ಬೇರೆ ಬೇರೆ ವಾಹನಗಳಲ್ಲಿ ಚಿಕಿತ್ಸೆಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು.
ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ತೀವ್ರ ಗಾಯಗೊಂಡ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೇರೆ-ಬೇರೆ ಆಸ್ಪತ್ರೆಗಳಿಗೆ ಕಳುಹಿಸಿದ್ದು, ಗಾಯಾಳುಗಳ ಪೈಕಿ ಅಮ್ಮು ಮೂಲ್ಯ ಎಂಬವರು ತೀವ್ರ ತರಹದ ಗಾಯಗೊಂಡು ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ