Recent Posts

Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ : ಏಳುನೂರು ವರ್ಷಗಳ ಇತಿಹಾಸ ಪ್ರಸಿದ್ಧ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಚಪ್ಪರ ಮುಹೂರ್ತ – ಕಹಳೆ ನ್ಯೂಸ್

ಬಂಟ್ವಾಳ : ಪಾಣೆಮಂಗಳೂರಿನ ಸುಮಾರು ಏಳುನೂರು ವರ್ಷಗಳ ಇತಿಹಾಸ ಪ್ರಸಿದ್ಧ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾ ಮಹೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ಸಮಾರಂಭವು ದೇವಸ್ಥಾನದ ಪ್ರಾಂಗಣದಲ್ಲಿ ನೆರವೇರಿತು.

ವೇದಮೂರ್ತಿ ವೆಂಕಪ್ಪಯ್ಯ ಭಟ್ ಕರ್ಬೆಟ್ಟು ಹಾಗೂ ಪ್ರಧಾನ ಅರ್ಚಕರಾದ ನಾರಾಯಣ ಮಯ್ಯರು,ಸಹ ಅರ್ಚಕ ಲಕ್ಷಣ ಆಕಾಶೆ,ಪ್ರಸನ್ನ ಹೆಗ್ಡೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಮೂಡಬಿದ್ರೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ,ಉಪಾಧ್ಯಕ್ಷ ರಘು ಸಪಲ್ಯ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷ ಜಗನ್ನಾಥ ಬಂಗೇರ, ಕೋಶಾಧಿಕಾರಿ ಕೆ.ಶಂಕರನಾರಾಯಣ ರಾವ್, ಸಹಸಂಚಾಲಕ ಕೃಷ್ಣಪ್ಪ ಗಾಣಿಗ, ಕೇಶವ ಕೋಡಿ, ನರಸಿಂಹ ಮಯ್ಯ ಬಿಸಿರೋಡ್, ಡಾ.ಆತ್ಮರಂಜನ್ ರೈ ಪಾಣೆಮಂಗಳೂರು, ಗೋವಿಂದ ಪೈ, ನವೀನ ಮಾಣಿಮಜಲು, ವಸಂತ ಪಿ., ಶ್ರೀ ಶ ರಾಯಸ,ಪುರುಷೋತ್ತಮ ಸಾಲ್ಯಾನ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ 2ರಿಂದ 12ರವರೆಗೆ ಬ್ರಹ್ಮ ಕಲಶೋತ್ಸವದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.5ರಂದು ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ರಘುನಾಥ ಸೋಮಯಾಜಿ  ತಿಳಿಸಿದರು. ಮೋಹನದಾಸ ಕೊಟ್ಟಾರಿ ನಿರೂಪಿಸಿ, ಕಾರ್ಯದರ್ಶಿ ಪದ್ಮನಾಭ ಮಯ್ಯ ಏಲಬೆ ವಂದಿಸಿದರು.