Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಬಿರ್ವೆರ್ ಪೆರ್ನೆ ಇವರ ವತಿಯಿಂದ 7ನೇ ಸೇವಾ ಯೋಜನೆಯ ಸಲುವಾಗಿ ಕರ್ವೇಲು ಕ್ವಾಟ್ರಾಸ್ ನಿವಾಸಿಗೆ ಛಾವಣಿ ನಿರ್ಮಾಣ – ಕಹಳೆ ನ್ಯೂಸ್

ಪೆರ್ನೆ : ಯಾವುದೇ ಪ್ರಚಾರದ ಅಭಿಲಾಷೆ ಇಲ್ಲದೆ, ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ, ಬಡ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಸಮಾಜ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಮುಂದುವರಿಯುತ್ತಿರುವ ಸಂಘಟನೆ ಅದು ಬಿರ್ವೆರ್ ಪೆರ್ನೆ ಬಿಳಿಯೂರ್. ಕಷ್ಟ ಎಂದವರ ಕೊರಳಿಗೆ ದನಿಯಾಗಿ ಸಮಾಜದಲ್ಲಿ ತನ್ನ ಸಾಮಾಜಿಕ ಕಾರ್ಯಗಳಿಂದಲೇ ಗುರುತಿಸಿಕೊಂಡಿರುವ ಸಂಘಟನೆಯು ಇದೀಗ ತನ್ನ 7ನೇ ಸೇವಾ ಯೋಜನೆಯ ಸಲುವಾಗಿ ಕರ್ವೇಲು ಕ್ವಾಟ್ರಾಸ್ ನಿವಾಸಿ ಶ್ರೀಮತಿ ಲೀಲಾವತಿ ಯವರ ಮನೆಗೆ ಛಾವಣಿ ನಿರ್ಮಿಸಿ ಕೊಟ್ಟು ಊರವರ ಮೆಚ್ಚುಗೆಗೆ ಪಾತ್ರರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಶ್ರೀ ರಾಮ ಭಜನಾ ಮಂದಿರ ಕರ್ವೇಲು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಊರಿನ ಗಣ್ಯರು ಕೂಡ ಶ್ರಮದಾನದಲ್ಲಿ ಭಾಗವಹಿಸಿದ್ದರು.