Recent Posts

Sunday, January 19, 2025
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಆಳ್ವಾಸ್ ಕಾಲೇಜಿನ ಬಿ.ಪಿ.ಟಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ : ಕೇರಳದಲ್ಲಿ ಪ್ರಿಯಕರನೊಂದಿಗೆ ವಿವಾಹವಾದ ಆದಿರಾ – ಕಹಳೆ ನ್ಯೂಸ್

ಮೂಡಬಿದ್ರೆ: ಫೆ.23ರಂದು ನಾಪತ್ತೆಯಾಗಿದ್ದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಬಿ.ಪಿ.ಟಿ ವಿದ್ಯಾರ್ಥಿನಿ ಆದಿರಾ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ.

ಉಡುಪಿ ಜಿಲ್ಲೆಯ ಕೊಲ್ಲೂರಿನವಳಾಗಿರುವ ಆದಿರಾ ಆಳ್ವಾಸ್ ಕಾಲೇಜಿನಲ್ಲಿ ಬಿ.ಪಿ.ಟಿ. ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಇಲ್ಲಿನ ಶಾಂಭವಿ ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ.23 ರಂದು ಬೆಳಿಗ್ಗೆ ಕಾಲೇಜಿನ ಬಸ್ಸಲ್ಲಿ ಬಂದಿದ್ದ ಆಕೆ ಕನ್ನಡ ಭವನ ಬಳಿ ಇಳಿದು ಹೋದಾಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಹೆತ್ತವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಆಕೆ ತನ್ನ ಪ್ರಿಯಕರನೊಂದಿಗೆ ಕೇರಳದಲ್ಲಿ ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ತನ್ನದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದ ಆಕೆ ಆತನನ್ನೇ ಮದುವೆಯಾಗಿದ್ದಾಳೆಂದು ತಿಳಿದು ಬಂದಿದ್ದು ಇಂದು ಅಥವಾ ನಾಳೆ ಮೂಡುಬಿದಿರೆ ಠಾಣೆಗೆ ಹಾಜರಾಗುವ ಸಾಧ್ಯತೆಯಿದೆ