ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ’ದ ರಜತ ಮಹೋತ್ಸವದ ನಿಮಿತ್ತ ಉಜಿರೆಯ ಶ್ರೀ ಸೀತಾರಾಮ ಕಲಾಮಂದಿರದಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮ
ಬೆಳ್ತಂಗಡಿ : ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಾಧಕರಾದ ಶ್ರೀ ಆನಂದ ಗೌಡ ರವರು ಮಾತನಾಡುತ್ತಾ, ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ ಮತ್ತು ಈ ಕಾರ್ಯವನ್ನು ತತ್ವನಿಷ್ಟತೆಯಿಂದ ಮಾಡುವ ಪತ್ರಿಕೆ ಎಂದರೆ ಸನಾತನ ಪ್ರಭಾತ. ‘ಗೋ ಹತ್ಯೆ, ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್ ಮುಂತಾದ ಅನೇಕ ಹಿಂದೂಗಳ ಮೇಲಾಗುತ್ತಿರುವ ಆಘಾತಗಳ ವಿರುದ್ಧ ಧ್ವನಿ ಎತ್ತಿ ಸತ್ಯನಿಷ್ಠ ಕಾರ್ಯವನ್ನು ಸನಾತನ ಪ್ರಭಾತ ಪತ್ರಿಕೆಯು ಮಾಡುತ್ತಿದೆ. ಸನಾತನ ಪ್ರಭಾತ ಪತ್ರಿಕೆಯು ಸುದ್ದಿಗಳನ್ನು ಪ್ರಕಟಿಸುವುದೊಂದಿಗೆ ಪ್ರತಿಯೊಂದು ಸುದ್ದಿಯಲ್ಲಿನ ದೃಷ್ಟಿಕೋನ ‘ ಇದು ಸನಾತನ ಪ್ರಭಾತದ ಪ್ರಮುಖ ವೈಶಿಷ್ಟ್ಯವಾಗಿದೆ. ಸುದ್ದಿಗಳನ್ನು ತಿಳಿಸುವ ಅನೇಕ ವಾರ್ತಾ ಪತ್ರಿಕೆಗಳಿವೆ, ಈ ಸುದ್ದಿಗಳಿಂದ ಓದುಗರು ಏನು ಬೋಧನೆಯನ್ನು ಪಡೆಯಬೇಕು ಎಂದು ಸನಾತನ ಪ್ರಭಾತ ಪತ್ರಿಕೆಯು ಮಾರ್ಗದರ್ಶನವನ್ನು ನೀಡುತ್ತದೆ. ಕೇವಲ ಓದುಗರ ಸಂಖ್ಯೆ ಹೆಚ್ಚಿಸುವುದು ಸನಾತನ ಪ್ರಭಾತದ ಉದ್ದೇಶವಲ್ಲ, ಬದಲಾಗಿ ಕಾರ್ಯಶೀಲತೆ ಇದು ಸನಾತನ ಪ್ರಭಾತದ ಮಾನದಂಡವಾಗಿದೆ. ಸನಾತನ ಪ್ರಭಾತದ ಅನೇಕ ಓದುಗರು, ಜಾಹೀರಾತುದಾರರು ಹಿತಚಿಂತಕರು ಇವರಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಯಥಾಶಕ್ತಿ ನೀಡಲಾಗುತ್ತಿರುವ ಯೋಗದಾನವಾಗಿದೆ. ಸಂತರು ಮಾಡಿರುವ ಮಾರ್ಗದರ್ಶನ ಮುಂತಾದವುಗಳನ್ನು ಪ್ರತಿನಿತ್ಯ ಪ್ರಸಾರ ಮಾಡಲಾಗುತ್ತದೆ. ಈ ಮೂಲಕ ಓದುಗರ ಮೇಲೆ ಸಾಧನೆಯ ಮಹತ್ವ ಬಿಂಬಿಸಲಾಗುತ್ತದೆ ಎಂದು ಸನಾತನ ಪ್ರಭಾತ ಪತ್ರಿಕೆಯ ಮಹತ್ವವನ್ನು ತಿಳಿಸಿ ಹೇಳಿದರು.
ಕನ್ನಡ ಸನಾತನ ಪ್ರಭಾತದ ವಿಶೇಷ ಪ್ರತಿನಿಧಿಯಾದ ಸೌ. ಶಾರದಾ ಭಂಡಾರ್ಕರ್ ರವರು ಸನಾತನ ಪ್ರಭಾತ ಪತ್ರಿಕೆಯು ಮೂಡಿ ಬರುತ್ತಿರುವ ಕಾರ್ಯದ ವಿಶ್ಲೇಷಣೆಯನ್ನು ಮಾಡಿದರು. ಇಂದು ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಮಟ್ಟದಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ಚರ್ಚಿಸಲಾಗುತ್ತಿದೆ. ಇಂದಿನಿಂದ 25 ವರ್ಷಗಳ ಮೊದಲು ಹಿಂದೂ ರಾಷ್ಟ್ರ ಈ ಶಬ್ದವನ್ನು ಉಚ್ಚರಿಸುವುದು ಒಂದು ಅಘೋಷಿತ ಅಪರಾಧವಾಗಿತ್ತು. ಇಂತಹ ಕಾಲದಲ್ಲಿ ‘ಈಶ್ವರಿ ರಾಜ್ಯ, ‘ಹಿಂದೂ ರಾಷ್ಟ್ರ, ಈ ಶಬ್ದಗಳನ್ನು ಸಮಾಜದಲ್ಲಿ ನಿಜವಾದ ಅರ್ಥದಿಂದ ಯಾರಾದರೂ ರೂಢಿಯಲ್ಲಿ ತಂದಿದ್ದರೆ, ಅದು ಸನಾತನ ಪ್ರಭಾತ ಮಾತ್ರ.’ಸನಾತನ ಪ್ರಭಾತ’ವು ಕೇವಲ ಸುದ್ದಿಯನ್ನು ನೀಡಿ, ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅನುಚಿತ ಘಟನೆಗಳು ನಡೆಯುವುದರ ಹಿಂದಿನ ಕಾರಣ, ಅದರ ಪರಿಣಾಮ ಮತ್ತು ಅದನ್ನು ನಿಲ್ಲಿಸಲು ಉಪಾಯ ಯೋಜನೆ, ಈ ವಿಷಯದಲ್ಲಿಯೂ ಮಾರ್ಗದರ್ಶನ ಮಾಡುತ್ತದೆ. ಯಾವುದೇ ಸಮಸ್ಯೆಯ ಮೂಲಕ್ಕೆ ಹೋಗಿ ವಿಶ್ಲೇಷಣೆ ಮಾಡಿ ಸುರಾಜ್ಯ ನಿರ್ಮಿತಿಯ ದೃಷ್ಟಿಯಿಂದ ಅವಶ್ಯಕ ಉಪಾಯ ಯೋಜನೆಯ ಮಾರ್ಗದರ್ಶನ ಹಾಗೂ ಕಾರ್ಯ ಮಾಡುವ ಸನಾತನ ಪ್ರಭಾತ ಏಕೈಕ ಪತ್ರಿಕೆಯಾಗಿದೆ ಎಂಬುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನೂರಕ್ಕಿಂತಲೂ ಹೆಚ್ಚು ಸನಾತನ ಪ್ರಭಾತದ ವಾಚಕರು. ಜಾಹೀರಾತುದಾರರು, ಹಿತಕಿಂತಕರು ಹಾಗೂ ಧರ್ಮಭಿಮಾನಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸನಾತನ ಪ್ರಭಾತದ ವಿಶೇಷ ವಾಚಕರಿಗೆ ಸನ್ಮಾನಿಸಲಾಯಿತು.