Recent Posts

Sunday, January 19, 2025
ಸುದ್ದಿ

ಕಡಮ್ಮಾಜಿ ಫಾರ್ಮ್‌ನ ದೇವಿಪ್ರಸಾದ್‌ರವರಿಗೆ ಲಭಿಸಿದ ‘ವಿಕ ಸೂಪರ್ ಸ್ಟಾರ್ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ – ಕಹಳೆ ನ್ಯೂಸ್

ಬೆಳ್ತಂಗಡಿ : ವಿಜಯ ಕರ್ನಾಟಕ ಪತ್ರಿಕೆ ಹಮ್ಮಿಕೊಂಡ 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕ ರೈತರಿಗೆ ಪುರಸ್ಕಾರ ನೀಡುವ ಆರನೇ ವರ್ಷದ ‘ವಿಕ ಸೂಪರ್ ಸ್ಟಾರ್ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿಯಿಂದ ಮೊಗ್ಗು ಗ್ರಾಮದ ಕಡಮ್ಮಾಜಿ ಫಾರ್ಮ್‌ನ ದೇವಿಪ್ರಸಾದ್ ಅವರು ಪುರಸ್ಕೃತಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಫೆ.25ರAದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್. ಕೆಂಪೇಗೌಡ, ಯೂನಿಯನ್ ಬ್ಯಾಂಕ್‌ನ ಡೆಪ್ಯೂಟಿ ರಿಜೀನಲ್ ಹೆಡ್ ವಿಶುಕುಮಾರ್, ವಿಜಯ ಕರ್ನಾಟಕದ ಆರ್‌ಎಂಡಿ ವಿಭಾಗದ ಸೀನಿಯರ್ ಮ್ಯಾನೇಜರ್ ನಾರಾಯಣ್, ರೆಸ್ಪಾನ್ಸ್ ವಿಭಾಗದ ಚೀಫ್ ಮ್ಯಾನೇಜರ್ ಅರವಿಂದ ಎಂ. ಒಡಿಯೂರು ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ವಿಜಯಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ. ರವೀಂದ್ರ ಶೆಟ್ಟಿ ಪ್ರಧಾನ ವರದಿಗಾರ ಸುಧಾಕರ ಸುವರ್ಣ ಹಾಗೂ ಮಹಮ್ಮದ್ ಆರಿಫ್ ಪಡುಬಿದ್ರಿ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು