ಕೊಡಗು: ಕೊಡಗಿನಲ್ಲಿ ಕಾಣಿಸಿಕೊಂಡ ಮಹಾಮಳೆ ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಇದಕ್ಕೆ ಕಾರಣವೇನು ಎಂಬುದು ಸಹ ತಿಳಿದಿರಲಿಲ್ಲ. ಈ ಅನಾಹುತ ಸಂಭವಿಸುವುದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರ ತಂಡ ಅಮೆರಿಕದ ಅತ್ಯಾಧುನಿಕ ಉಪಕರಣ ಬಳಸಿ ಈ ಸಮಸ್ಯೆಯ ಮೂಲ ಅರಿಯಲು ಪ್ರಯತ್ನಿಸಿದ್ದು,. ಭೂಕಂಪನವೇ ಇದಕ್ಕೆ ಕಾರಣ ಎಂದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರೇಣುಕಾಪ್ರಸಾದ್ ಮತ್ತು ಡಾ. ಪರಮೇಶ್ ನಾಯಕ್ ನೇತೃತ್ವದ ಭೂಗರ್ಭ ಶಾಸ್ತ್ರಜ್ಞರ ತಂಡವು ಅಡ್ವಾನ್ಸ್ ಸರ್ಫೇಸ್ ಪರೀಕ್ಷೆಯ ಉಪಕರಣವನ್ನು ಬಳಸಿ ಅಧ್ಯಯನ ನಡೆಸುತ್ತಿದ್ದು. ಯಾವತ್ತೋ ಆಗಿರುವ ಭೂಕಂಪನದಿಂದಾಗಿ ಭೂಮಿಯಲ್ಲಿ ಬಿರುಕು ಉಂಟಾಗಿದೆ.
ಈ ಬಿರುಕುಗಳ ಮೂಲಕ ನೀರು ಒಳ ನುಗ್ಗಿದ್ದು. ಕೊನೆಗೆ ಒತ್ತಡ ತಡೆಯಲಾಗದೇ ನೀರು ಹೊರಗೆ ಬಂದು, ಭೂ ಕುಸಿತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.